ಒಂದೂವರೆ ವರ್ಷದಲ್ಲಿ ತಲಾಕ್ ಅಂತ್ಯ : ಮುಸ್ಲಿಂ ಲಾ ಬೋರ್ಡ್

ಲಕ್ನೋ : ಮುಂದಿನ ಒಂದೂವರೆ ವರ್ಷದಲ್ಲಿ ಮೂರು ಬಾರಿ ತಲಾಕ್ ಪದ್ಧತಿ ಅಂತ್ಯವಾಗಲಿದೆ ಎಂದಿರುವ ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ(ಎಐಎಂಪಿಎಲ್‍ಬಿ) ಉಪಾಧ್ಯಕ್ಷ ಸಾಯೀದ್ ಸಿದಿಕ್, ಈ ವಿಷಯದಲ್ಲಿ “ಸರ್ಕಾರದ ಹಸ್ತಕ್ಷೇಪ” ಅಗತ್ಯವಿಲ್ಲ ಎಂದಿದ್ದಾರೆ. ಶರಿಯತ್ ಮತ್ತು ಮೂರು ಬಾರಿ ತಲಾಕ್ ವಿರುದ್ಧ ಮುಸ್ಲಿಂ ಮಹಿಳೆಯರಿಂದ ದೇಶಾದ್ಯಂತದಿಂದ ಸುಮಾರು 3.50 ಕೋಟಿ ಅರ್ಜಿಗಳು ಬಂದಿವೆ  ಎಂದು ಎಐಎಂಪಿಎಲ್‍ಬಿ ಹೇಳಿಕೆ ನೀಡಿದ್ದ ಎರಡು ದಿನಗಳ ಬಳಿಕ ಈ ಹೇಳಿಕೆ ಹೊರಬಿದ್ದಿದೆ.