ತಲಾಕ್ ಮುಸ್ಲಿಂ ಪುರುಷ-ಮಹಿಳೆ ಸಮಸ್ಯೆ : ಸರ್ಕಾರ

ನವದೆಹಲಿ : “ಮೂರು ಬಾರಿ ತಲಾಕ್ ಪದ್ಧತಿ ಬಹುಸಂಖ್ಯಾತರು ಮತ್ತು ಅಲ್ಪಸಂಖ್ಯಾತರ ಮಧ್ಯೆ ಹೋರಾಟವಲ್ಲ. ಇದು ಮುಸ್ಲಿಂ ಪುರುಷರು ಮತ್ತು ಮಹಿಳೆಯರ ಮಧ್ಯೆ ನಡೆಯುತ್ತಿರುವ ಕಲಹ” ಎಂದು ಸರ್ಕಾರ ಹೇಳಿದೆ. ಸುಪ್ರೀಂ ಕೋರ್ಟಿನಲ್ಲಿ ಮೂರು ಬಾರಿ ತಲಾಕ್, ಬಹುಪತ್ನಿತ್ವ ಮತ್ತು ನಿಕಾಹ ಹಲಾಲ್ ವಿಷಯಕ್ಕೆ ಸಂಬಂಧಿಸಿದಂತೆ ಮುಂದುವರಿದಿರುವ ವಿಚಾರಣೆ ವೇಳೆ ಕೇಂದ್ರ ಸರ್ಕಾರ ಸ್ಪಷ್ಟನೆ ನೀಡುತ್ತ, ಈ ಪದ್ಧತಿ ರದ್ದುಗೊಳಿಸುವಂತೆ ಎಲ್ಲೆಡೆಯಿಂದ ಒತ್ತಡವಿದೆ ಎಂದಿದೆ.