ಅಂಗಡಿ ತೆರವಿಗೆ ತಹಶೀಲ್ದಾರ್ ಸೂಚನೆ

ಬಂಟ್ವಾಳ : ಜಿಲ್ಲಾಧಿಕಾರಿ ಸೂಚನೆ ಮೇರೆಗೆ ವಾಹನ ಪಾರ್ಕಿಂಗಿಗಾಗಿ ಬಿ ಸಿ ರೋಡು-ಕೈಕುಂಜೆ ಪ್ರದೇಶದಲ್ಲಿ ಅಂಗಡಿಗಳನ್ನು ತೆರವುಗೊಳಿಸುವಂತೆ ತಾಲೂಕು ತಹಶಿಲ್ದಾರ್ ಹಾಗೂ ಪುರಸಭಾಧಿಕಾರಿಗಳು ತೆರಳಿ ವ್ಯಾಪಾರಿಗಳಿಗೆ ಸಮಯ ಗಡುವು ವಿಧಿಸಿದರು. ಈ ಸಂದರ್ಭ ತಾಲೂಕು ತಹಶೀಲ್ದಾರ ಪುರಂದರ ಹೆಗ್ಡೆ, ಪುರಸಭಾ ಮುಖ್ಯಾಧಿಕಾರಿ ಎಂ ಎಚ್ ಸುಧಾಕರ್, ಸಮುದಾಯ ಸಂಘಟನಾಧಿಕಾರಿ ಮತ್ತಡಿ, ಪುರಸಭಾ ಕಂದಾಯ ಅಧಿಕಾರಿ ಶಿವನಾಯ್ಕ, ಕಂದಾಯ ನಿರೀಕ್ಷ ಪುರುಷೋತ್ತಮ, ಗ್ರಾಮ ಕರಣಿಕರಾದ ಯೋಗಾನಂದ, ಜನಾರ್ದನ, ತಾಲೂಕು ಕಛೇರಿ ಸಿಬ್ಬಂದಿಗಳಾದ ಸದಾಶಿವ ಕೈಕಂಬ ಹಾಗೂ ಶಿವ ಪ್ರಸಾದ್ ಜೊತೆಗಿದ್ದರು.