ತದಡಿ ಬಂದರು ಯೋಜನೆಗೆ ಕೊನೆಗೂ ಪರಿಸರ ತಜ್ಞರ ಸಮಿತಿಯ ಗ್ರೀನ್ ಸಿಗ್ನಲ್

ನವದೆಹಲಿ : ಕರ್ನಾಟಕದ ಕೈಗಾರಿಕೆ ಮತ್ತು ಮೂಲಭೂತ ಸೌಲಭ್ಯ ಅಭಿವೃದ್ಧಿ ಸಚಿವಾಲಂiÀಲವು ರೂ 3,813 ಕೋಟಿ ವೆಚ್ಚದಲ್ಲಿ ನಿರ್ಮಿಸಲುದ್ದೇಶಿಸಿರುವ ಗೋಕರ್ಣ ಸಮೀಪದ ತದಡಿ ಸರ್ವಋತು ಬಂದರಿಗೆ  ಕೇಂದ್ರ ಪರಿಸರ ಇಲಾಖೆಯ ತಜ್ಞರ ಸಮಿತಿ ಹಸಿರು ನಿಶಾನೆ ನೀಡಿದ್ದು, ಯೋಜನೆಯು ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಇಲಾಖೆಯ ಅನುಮತಿ ಪಡೆಯುವುದಷ್ಟೇ ಬಾಕಿಯಿದೆ.

ತಜ್ಞರ ಸಮಿತಿ ಅನುಮೋದಿಸಿದ ಯೋಜನೆಗಳನ್ನು ಇಲಾಖೆ ತಿರಸ್ಕರಿಸಿದ ಉದಾಹರಣೆಗಳು ಇಲ್ಲದೇ ಇರುವುದರಿಂದ ತದಡಿ ಬಂದರು ಯೋಜನೆ ಜಾರಿ ಖಚಿತವೆಂದೇ ಹೇಳಬಹುದು.  ಪ್ರಸ್ತಾವಿತ ಯೋಜನೆಯು ಪರಿಸರ ರಕ್ಷಣೆಗೆ ಸಂಬಂಧಿಸಿದ 27 ನಿಯಮಗಳನ್ನು ಪಾಲಿಸುವಂತೆ ನೋಡಿಕೊಂಡು ನಿರಾಪೇಕ್ಷಣಾ ಪತ್ರ ನೀಡುವಂತೆ ಕರಾವಳಿ ನಿಯಂತ್ರಣಾ ವಲಯಕ್ಕೂ ತಜ್ಞರ ಸಮಿತಿ ಶಿಫಾರಸು ಮಾಡಿದೆ.

ಈ ಪ್ರಸ್ತಾವಿತ ಯೋಜನೆಯಿಂದ ಸಮುದ್ರದ ನೀರು ಕಲುಷಿತಗೊಂಡು ಪರಿಸರದ ಮೇಲೆ ಪ್ರತಿಕೂಲ ಪರಿಣಾಮ ಬೀರಬಹುದು, ಮೀನುಗಾರರಿಗೆ ತೊಂದರೆಯುಂಟಾಗಬಹುದು ಹಾಗೂ ಮ್ಯಾಂಗ್ರೋವ್ ಕಾಡುಗಳ ರಕ್ಷಣೆಗೆ ಸಮಸ್ಯೆಯಾದೀತು ಎಂಬ ಆತಂಕದ ಹಿನ್ನೆಲೆಯಲ್ಲಿ ಈ ಯೋಜನೆ ವಿರೋಧ ಎದುರಿಸುತ್ತಿತ್ತು.