ಟಿ ಎನ್ ಸೀತಾರಾಂ `ಕಾಫಿ ತೋಟ’ ರೆಡಿ

ಟೀವಿ ಧಾರಾವಾಹಿಗಳ ಮೂಲಕವೇ ಪ್ರಸಿದ್ದಿಗೆ ಬಂದ ಟಿ ಎನ್ ಸೀತಾರಾಂ ಈಗ `ಕಾಫಿ ತೋಟ’ ಎನ್ನುವ ಚಿತ್ರವನ್ನು ನಿರ್ದೇಶಿಸುತ್ತಿದ್ದು ಅದರ ಚಿತ್ರೀಕರಣ ಈಗ ಮುಗಿದಿದೆ.

“ಕಾಫಿತೋಟ’ ಇದೊಂದು ನಿಗೂಢ ಕಥೆಯ ರೋಚಕ ಕಮರ್ಶಿಯಲ್ ಚಿತ್ರ. ಯಾವುದೇ ಸಂದೇಶವನ್ನು ನೀಡುವ ಉದ್ದೇಶದಿಂದ ಇದನ್ನು ಮಾಡಿಲ್ಲ. ಮನೋರಂಜನೆಯನ್ನ ದೃಷ್ಟಿಯಲ್ಲಿಟ್ಟುಕೊಂಡೇ ಕಥೆ ಹೆಣೆಯಲಾಗಿದೆ.” ಎನ್ನುತ್ತಾರೆ ಸೀತಾರಾಂ. ಈ ಚಿತ್ರದಲ್ಲಿ ಪ್ರಕೃತಿ ಸಹಜವಾದ ನಿಗೂಢವಿದೆಯಂತೆ. ಚಿತ್ರದ ಮುಖ್ಯಭೂಮಿಕೆಯಲ್ಲಿ ರಘು ಮುಖರ್ಜಿ ಮತ್ತು `ರಂಗಿತರಂಗ’ ಬೆಡಗಿ ರಾಧಿಕಾ ಚೇತನ್ ಅಭಿನಯಿಸುತ್ತಿದ್ದಾರೆ.  ಸಿನಿಮಾ ಜೂನ್ ತಿಂಗಳಲ್ಲಿ ಬಿಡುಗಡೆಯಾಗುವ ನಿರೀಕ್ಷೆ ಇದೆ.

ಅಂದ ಹಾಗೆ ಇದಲ್ಲದೇ ಸೀತಾರಾಂ ಇನ್ನೂ ಒಂದು ಚಿತ್ರ ತಯಾರಿಸುವ ಯೋಚನೆಯಲ್ಲಿದ್ದಾರೆ. ಅವರಲ್ಲಿ ಈಗ ಮೂರು ಸ್ಕ್ರಿಪ್ಟ್ ರೆಡಿಯಿದ್ದು ಅವುಗಳಲ್ಲಿ ಒಂದನ್ನು `ಕಾಫಿತೋಟ’ ಸಿನಿಮಾ ರಿಲೀಸ್ ಆದ ಬೆನ್ನಲ್ಲೇ ಕೈಗೆತ್ತಿಕೊಳ್ಳುವ ಯೋಚನೆ ಇದೆಯಂತೆ.