ಸ್ವಿಝರ್ಲೆಂಡಿನ ಮುಸ್ಲಿಂ ಬಾಲಕಿಯರು ಬಾಲಕರ ಜತೆ ಈಜುವುದು ಅನಿವಾರ್ಯ

ಯುರೋಪಿಯನ್ ಕೋರ್ಟ್ ತೀರ್ಪು

ಸ್ವಿಝರ್ಲೆಂಡ್ : ಬಾಲಕ-ಬಾಲಕಿಯರಿಗೆ ಜತೆಯಾಗಿ ನಡೆಸಲಾಗುವ ಈಜು ತರಗತಿಗಳಿಗೆ ತಮ್ಮ ಪುತ್ರಿಯರನ್ನು ಕಳುಹಿಸಲು ಮುಸ್ಲಿಂ ಹೆತ್ತವರನ್ನು ಬಲವಂತಪಡಿಸುವ ಅಧಿಕಾರವನ್ನು ಸ್ವಿಝರ್ಲೆಂಡ್ ಸರಕಾರವು  ಯುರೋಪಿಯನ್ ಕೋರ್ಟ್ ಆಫ್ ಹ್ಯೂಮನ್ ರೈಟ್ಸ್ ಮುಂದಿದ್ದ ಪ್ರಕರಣವೊಂದನ್ನು ಗೆಲ್ಲುವ ಮೂಲಕ  ಪಡೆದಿದೆ.

ಧಾರ್ಮಿಕ ಸ್ವಾತಂತ್ರ್ಯದ ವಿಚಾರದಲ್ಲಿ ಹಸ್ತಕ್ಷೇಪವೆಂದು ಈ ಆದೇಶವನ್ನು ಬಣ್ಣಿಸಬಹುದಾದರೂ  ಸಾಮಾಜಿಕ ಏಕೀಕರಣ ದೃಷ್ಟಿಯಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಏಳು ಮಂದಿ ನ್ಯಾಯಾಧೀಶರ ಪೀಠವೊಂದು ಹೇಳಿದೆ.

ತಮ್ಮ ಧಾರ್ಮಿಕ ನಂಬಿಕೆಗಳಿಗೆ ವಿರುದ್ಧವಾಗಿದೆಯೆಂಬ ನೆಪದಲ್ಲಿ ತಮ್ಮ ಪುತ್ರಿಯರನ್ನು  ಈಜು ತರಗತಿಗಳಿಗೆ ಕಳುಹಿಸಲು  ನಿರಾಕರಿಸಿ ಕೋರ್ಟಿನ ಮೊರೆ ಹೋಗಿದ್ದ ಬಾಸೆಲ್ ಪಟ್ಟಣದ ಇಬ್ಬರು ಸ್ವಿಸ್-ಟರ್ಕಿಶ್ ಹೆತ್ತವರ ಪ್ರಕರಣದಲ್ಲಿ  ಯುರೋಪಿಯನ್ ಕೋರ್ಟ್ ಆಫ್ ಹ್ಯೂವiನ್ ರೈಟ್ಸ್ ಮೇಲಿನಂತೆ ಆದೇಶ ನೀಡಿದೆ. ಈ ದಂಪತಿಗಳು  ಮೊದಲು ಬಾಸೆಲ್ ಕೋರ್ಟ್ ಹಾಗೂ ನಂತರ ಸ್ವಿರ್ಝಲೆಂಡಿನ ಫೆಡರಲ್ ಕೋರ್ಟಿಗೆ ಅಪೀಲು ಸಲ್ಲಿಸಿದ್ದರೂ ಅಲ್ಲಿ ಬಂದ ಪ್ರತಿಕೂಲ ತೀರ್ಪಿನ ಹಿನ್ನೆಲೆಯಲ್ಲಿ ಯುರೋಪಿಯನ್ ಕೋರ್ಟಿಗೆ ಮೊರೆ ಹೋಗಿದ್ದು ಅಲ್ಲಿಯೂ ಅವರಿಗೆ ಹಿನ್ನಡೆಯಾಗಿದೆ.

ಮಂಗಳವಾರ ಆದೇಶ ನೀಡಿದ ಯುರೋಪಿಂiÀiನ್ ಕೋರ್ಟ್ ಆಪ್ ಹ್ಯೂವiನ್ ರೈಟ್ಸ್  ಪೀಠದಲ್ಲಿ ಸ್ವಿಝರ್ಲೆಂಡ್, ಸ್ವೀಡನ್, ಸ್ಪೇನ್, ಸರ್ಬಿಯ ಮತ್ತು ಸ್ಲೊವಾಕಿಯಾದ ನ್ಯಾಯಾಧೀಶರಿದ್ದು ವಿದೇಶಿ ವಿದ್ಯಾರ್ಥಿಗಳು ಯಾವುದೇ ರೀತಿಯ ಸಾಮಾಜಿಕ ಬಹಿಷ್ಕಾರಕ್ಕೆ ಒಳಗಾಗದಂತೆ ಅವರನ್ನು ರಕ್ಷಿಸುವ ಕ್ರಮ ಇದಾಗಿದೆ ಎಂದು ಹೇಳಿದೆ.