ಸ್ವಿರ್ಝಲ್ಯಾಂಡ್ ಸಂಸದ ನಿಕ್ ಗುಗ್ಗರ್ ನಮ್ಮ ಉಡುಪಿಯವರು

ಮಂಗಳೂರು : ಇತ್ತೀಚೆಗೆ ಸ್ವಿರ್ಝಲ್ಯಾಂಡಿನ ರಾಜಧಾನಿ ಬರ್ನ್ ನಗರದಲ್ಲಿ ಸ್ವಿಸ್ ನ್ಯಾಷನಲ್ ಕೌನ್ಸಿಲ್ ಸದಸ್ಯರಾಗಿ ಪ್ರಮಾಣ ವಚನ ಸ್ವೀಕರಿಸಿರುವ ನಿಕ್ ಗುಗ್ಗರ್ ಅವರು ಮೂಲತಃ ಉಡುಪಿ ಜಿಲ್ಲೆಯವರು. ನಲ್ವತ್ತೇಳು ವರ್ಷದ ನಿಕ್ ಹುಟ್ಟಿದ್ದು ಉಡುಪಿಯಲ್ಲಿ, ಎಂಬತ್ತರ ದಶಕದಲ್ಲಿ ಅವರು ಸಾಕಷ್ಟು ಬಾರಿ ಉಡುಪಿ ಕೃಷ್ಣ ಮಠಕ್ಕೆ ಭೇಟಿ ನೀಡಿದ್ದಾರೆ. ಭಾರತದ ಜತೆಗಿನ ತಮ್ಮ ಆತ್ಮೀಯ ನಂಟು ಉಳಿಸಿಕೊಳ್ಳಲು ಅವರು ಆಗಾಗ ಇಲ್ಲಿಗೆ ಬರುತ್ತಲೇ ಇರುತ್ತಾರೆ.

ರಾಜತಾಂತ್ರಿಕತೆಯ ಮೂಲಕ ಅವರು ಭಾರತ ಮತ್ತು ಸ್ವಿರ್ಝಲ್ಯಾಂಡ್ ನಡುವಣ ಸಂಬಂಧ ಬಲಪಡಿಸುವ ಇಚ್ಛೆ ಹೊಂದಿದ್ದಾರೆ. ಮೇ 1, 1970ರಲ್ಲಿ ಉಡುಪಿಯ ಬಾಸೆಲ್ ಮಿಶನ್ ಆಸ್ಪತ್ರೆಯಲ್ಲಿ ಜನಿಸಿದ್ದ ಅವರನ್ನು ಸ್ವಿರ್ಝಲ್ಯಾಂಡಿನ ದಂಪತಿ ಫ್ರಿಟ್ಝ್ ಗುಗ್ಗರ್ ಮತ್ತು ಎಲಿಜಬೆತ್ ಗುಗ್ಗರ್ ದÀತ್ತು ಪಡೆದುಕೊಂಡಿದ್ದರು.  ತಲಶ್ಶೇರಿಯಲ್ಲಿರುವ ನೆಟ್ಟೂರು ತಾಂತ್ರಿಕ ಶಿಕ್ಷಣ ಪ್ರತಿಷ್ಠಾನದಲ್ಲಿ ಅವರ ಸಾಕು ಹೆತ್ತವರು ಶಿಕ್ಷಕರಾಗಿದ್ದರಿಂದ ನಿಕ್ ಅಲ್ಲಿಯೇ ಬೆಳೆದಿದ್ದರು. ನಂತರ ಅವರ ಜತೆಗೆ ಸ್ವಿರ್ಝಲ್ಯಾಂಡಿಗೆ ನಿಕ್ ಪ್ರಯಾಣಿಸಿದ್ದರು. ನಿಕ್ ಅವರು ಗುಂಡರ್ಟ್ ಫೌಂಡೇಶನ್ ಸ್ಕೂಲ್ ಜತೆ ಸಹಯೋಗ ಹೊಂದಿದ್ದು, ಅವರ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಭಾರತಕ್ಕೆ ಬರುತ್ತಿರುತ್ತಾರೆ.

“ನನಗೆ ಭಾರತ ಮತ್ತು ಸ್ವಿಸ್ ಸಂಸ್ಕøತಿಗಳೆರಡೂ ಇಷ್ಟ. ಭಾರತ-ಸ್ವಿರ್ಝಲ್ಯಾಂಡಿನ 70 ವರ್ಷಗಳ ಗೆಳೆತನದ ಆಚರಣೆಗೆ ನಾನು ಮುಂದಿನ ವರ್ಷ ತಲಶ್ಶೇರಿಗೆ ಭೇಟಿ ನೀಡುವ ನಿರೀಕ್ಷೆಯಲ್ಲಿದ್ದೇನೆ” ಎಂದು ಅವರು ಹೇಳಿದ್ದಾರೆ.

ನಿಕ್ ಅವರಿಗೆ ಉಡುಪಿಯಲ್ಲಿ ತೀರಾ ಆತ್ಮೀಯರಾಗಿರುವ ಹೀಡಿ ಶಿರಿ ಎಂಬವರು ನಿಕ್ ಅವರ ಬಗ್ಗೆ ಅಭಿಮಾನದಿಂದ ಮಾತನಾಡುತ್ತಾರೆ. ನಿಕ್ ಯಾವತ್ತೂ ಇಲ್ಲಿನ ತಮ್ಮ ಸ್ನೇಹಿತರು ಮತ್ತು ಕುಟುಂಬ ವರ್ಗದವರೊಂದಿಗೆ ಸಂಪರ್ಕದಲ್ಲಿರುತ್ತಾರೆ ಎಂದು ಅವರು ಹೇಳುತ್ತಾರೆ.