ವಿದೇಶದಿಂದ ತ್ಯಾಜ್ಯ ಆಮದು ಮಾಡುತ್ತಿರುವ ಸ್ವೀಡನ್

ಸ್ಟಾಕೋಮ್ : ಹಲವಾರು ದೇಶಗಳು ತ್ಯಾಜ್ಯ ಸಮಸ್ಯೆಯಿಂದ ಕಂಗೆಟ್ಟಿದ್ದರೆ, ಸ್ವೀಡನ್ ದೇಶವು ತ್ಯಾಜ್ಯ ಕೊರತೆಯನ್ನನುಭವಿಸುತ್ತಿದೆ. ದೇಶದ ತ್ಯಾಜ್ಯ ಮರುಪೂರಣ ಘಟಕಗಳು ತ್ಯಾಜ್ಯದ ಕೊರತೆಯನ್ನು ನೀಗಿಸಲು ಇದೀಗ ಇತರ ದೇಶಗಳ ತ್ಯಾಜ್ಯಗಳನ್ನು  ಆಮದು ಮಾಡುವ ಅನಿವಾರ್ಯಕ್ಕೆ ಬಿದ್ದಿವೆ.

ಸ್ವೀಡನ್ ದೇಶದ ಮುನಿಸಿಪಾಲಿಟಿ ಆಡಳಿತಗಳು ಅತ್ಯಾಧುನಿಕ ರೀತಿಯಲ್ಲಿ ತ್ಯಾಜ್ಯ ಸಂಗ್ರಹ ಮತ್ತದರ ವಿಲೇವಾರಿ ಮಾಡುತ್ತಿದ್ದು ಅಲ್ಲಿ ತ್ಯಾಜ್ಯ ಸಾಗಾಟ ಸಮಸ್ಯೆಯನ್ನು ನಿವಾರಿಸುವ ಸಲುವಾಗಿ ಪ್ರತಿ ಪ್ರದೇಶದಲ್ಲಿ ಸ್ವಯಂಚಾಲಿತ ವ್ಯಾಕ್ಯೂಮ್ ವ್ಯವಸ್ಥೆ ಹಾಗೂ ಭೂಗತ ಶೇಖರಣಾ ಘಟಕವಿದೆ.