ಸ್ವಚ್ಛ ಮಂಗಳೂರು ಹಾಗೂ ಸ್ಮಾರ್ಟ್ ಸಿಟಿ

ಮಂಗಳೂರು ನಗರಪಾಲಿಕೆ ಅಧಿಕಾರಿಗಳು ಹಾಗೂ ಇತರ ಸಂಘ ಸಂಸ್ಥೆಗಳು ಹಲವಾರು ಸಮಯಗಳಿಂದ ಸ್ವಚ್ಛತೆಯ ಬಗ್ಗೆ ಅರಿವು ಮೂಡಿಸುವಿಕೆ, ಜನಸಾಮಾನ್ಯರಲ್ಲಿ ಸ್ವಚ್ಛತೆಯ ಬಗ್ಗೆ ತಿಳುವಳಿಕೆ ಹಾಗೂ ಕರಪತ್ರ ವಿತರಣೆ, ಮಾಧ್ಯಮಗಳಲ್ಲಿ ಪ್ರಕಟಣೆ ಮುಂತಾದ ಕಾರ್ಯಕ್ರಮಗಳು ಯಥಾವತ್ತಾಗಿ ನಡೆಯುತ್ತಿದೆ. ಆದರೂ ನಮ್ಮ ಮಂಗಳೂರು ಸಂಪೂರ್ಣ ಸ್ವಚ್ಛತೆ ಆಗಲು ಸಾಧ್ಯವೆ ಎಂಬ ಪ್ರಶ್ನೆ ಉದ್ಭವಿಸುತ್ತದೆ. ಸಂಪೂರ್ಣ ಸ್ವಚ್ಛ ಮಂಗಳೂರು ನಗರ ಆಗಬೇಕಿದ್ದರೆ ಒಂದೊಂದೇ ವಾರ್ಡ್ ಉದಾ : ಬೆಂದೂರ್ ವಾರ್ಡ್ ಅಥವಾ ಬಿಜೈ ಕಂಕನಾಡಿ ಇತ್ಯಾದಿ ಇತರ ವಾರ್ಡುಗಳಲ್ಲಿ ಯಾವ ಸಮಸ್ಯೆ ಇದೆ. ಫುಟ್ಪಾತ್ ಇದೆಯೇ ರಸ್ತೆ ಬದಿ ಒಳಚರಂಡಿಗಳಲ್ಲಿ ಕಸ ತ್ಯಾಜ್ಯಗಳ ರಾಶಿ ಇದೆಯೇ, ರಸ್ತೆ ಬದಿಯ ಫುಟ್ಪಾತುಗಳನ್ನು ಜನರಿಗೆ ನಡೆದಾಡಲು ಅಡ್ಡಿಯಾಗುತ್ತಿರುವ ಕಲ್ಲುಗಳ ರಾಶಿ ಕಳೆ ಗಿಡಗಳು ಪ್ಲಾಸ್ಟಿಕ್ ತೊಟ್ಟಿಗಳು ರಾರಾಜಿಸುತ್ತಿದೆಯೇ ಎಂಬುದರ ಬಗ್ಗೆ ಆಯಾಯ ವಾರ್ಡಿನ ಸದಸ್ಯರು ಗಮನಹರಿಸಬೇಕು ಕಸ ಹುಡುಕಿ ಬಹುಮಾನ ಗಳಿಸಿ ಎಂಬಂತೆ ಮಾಡಬೇಕು ಪುನಃ ಪುನಃ ಇದೇ ಸಮಸ್ಯೆ ಮರುಕಳಿಸಿದ್ದಲ್ಲಿ ಇದಕ್ಕೆ ಯಾರು ಹೊಣೆ ಈ ಕಸ ತ್ಯಾಜ್ಯಗಳು ಪುನಃ ಇಲ್ಲಿ ಹೇಗೆ ಬಿದ್ದಾವು. ಆಯಾ ವ್ಯಕ್ತಿಯ ಮೇಲೆ ದಂಡ ವಿಧಿಸುವ ಅಥವಾ ಆತನಿಂದಲೇ ಅದನ್ನು ತೆಗೆಸುವ ಕ್ರಮ ಕೈಗೊಳ್ಳಬೇಕು ಯಾವ ವಾರ್ಡ್ ನೋಡಲು ಸುಂದರ ಹಾಗೂ ಸ್ವಚ್ಛತೆ ಇದೆಯೇ ಆಯಾ ವಾರ್ಡಿನ ಕಾರ್ಪೊರೇಟರುಗಳನ್ನು ವರ್ಷಕ್ಕೊಮ್ಮೆ ನಗರಪಾಲಿಕೆ ಸ್ವಚ್ಛತಾ ದಿನವನ್ನಾಗಿ ಆಚರಿಸಿ ಅವರನ್ನು ಸನ್ಮಾನಿಸುವ ಕಾರ್ಯಕ್ರಮ ಹಮ್ಮಿಕೊಳ್ಳಬೇಕು ಕಸ ಗುಡಿಸುವವರು ಕೂಡಾ ತಂತಮ್ಮ ವ್ಯಾಪ್ತಿಯಲ್ಲಿ ತಮ್ಮ ಮನೆಯ ಅಂಗಣವನ್ನು ಸ್ವಚ್ಛಗೊಳಿಸಿದಂತೆ ಯಾವುದೇ ಕಸ ಕಡ್ಡಿಗಳು ತ್ಯಾಜ್ಯಗಳು ರಸ್ತೆಯಲ್ಲಿ ಕಾಣ ಸಿಗದಂತೆ ಇರಬೇಕು ಇದರಿಂದಾದರೂ ನಮ್ಮ ಮಂಗಳೂರು ನಗರ ಸ್ವಚ್ಛ ಮಂಗಳೂರು ಹಾಗೂ ಸ್ಮಾರ್ಟ್ ಸಿಟಿಯಾದೀತೇ ಎಂಬುದು ನನ್ನ ಅನಿಸಿಕೆ

  • ಅರ್ಥರ್ ಮೆಂಡೋನ್ಸಾ  ಪುತ್ತೂರು