ವಿದ್ಯಾರ್ಥಿನಿ ಮೇಲೆ ಅತ್ಯಾಚಾರಗೈದು ಅಮಾನತುಗೊಂಡ ಶಿಕ್ಷಕನ ಬಂಧನ

ಸಾಂದರ್ಭಿಕ ಚಿತ್ರ

 ಬೆಂಗಳೂರು : ವಿದ್ಯಾರ್ಥಿನಿಯೊಬ್ಬಳು ನೀಡಿದ ಲೈಂಗಿಕ ಕಿರುಕುಳ ದೂರಿನ ಹಿನ್ನೆಲೆಯಲ್ಲಿ ಶಾಲೆಯಿಂದ ಅಮಾನತುಗೊಂಡಿದ್ದ ಗಣಿತ ಶಿಕ್ಷಕನೊಬ್ಬ ನಂತರ ಆಕೆಯ ಮೇಲೆ ಅತ್ಯಾಚಾರಗೈದ ಘಟನೆ ನಡೆದಿದ್ದು ಇದೀಗ ಆರೋಪಿ ಶಿಕ್ಷಕನನ್ನು ಬಂಧಿಸಲಾಗಿದೆ.

ಹತ್ತನೇ ತರಗತಿ ವಿದ್ಯಾರ್ಥಿನಿಯಾದ ಸಂತ್ರಸ್ತೆಯ ಮೇಲೆ ಒಲವು ಹೊಂದಿದ್ದ ಶಿಕ್ಷಕ ಆಕೆಗೆಂದೇ ಸ್ಪೆಶಲ್ ಕ್ಲಾಸುಗಳನ್ನು ಶಾಲೆಯ ಅವಧಿಯ ನಂತರ ನಡೆಸಿ ಆಕೆಗೆ ಪರೀಕ್ಷೆಗೆ ಬರಬಹುದಾದ ಪ್ರಶ್ನೆಗಳ ವಿವರ ನೀಡುವ ನೆಪದಲ್ಲಿ ಲೈಂಗಿಕ ಕಿರುಕುಳ ನೀಡುತ್ತಿದ್ದನೆಂದು ಆರೋಪಿಸಲಾಗಿದೆ. ಶಿಕ್ಷಕನ ವಿರುದ್ಧ ಬಾಲಕಿ ಮುಖ್ಯೋಪಾಧ್ಯಾಯರಿಗೆ ದೂರು ನೀಡಿದ ನಂತರ ಆತ ಅಮಾನತುಗೊಂಡಿದ್ದ.

ನಂತರ ವಿದ್ಯಾರ್ಥಿನಿಯಲ್ಲಿ ಕ್ಷಮಾಪಣೆ ಕೋರುವ ನಾಟಕವಾಡಿ ಆಕೆಗೆ ಮತ್ತು ಬರಿಸುವ ಪಾನೀಯ ಕುಡಿಸಿ ಆತ ಅತ್ಯಾಚಾರವೆಸಗಿದ್ದ ಎಂದು  ಆರೋಪಿಸಲಾಗಿದೆ. ಇದೀಗ ಬಂಧಿತನಾಗಿರುವ ಆರೋಪಿಯನ್ನು ಇಲಿಯಾಸ್ ನಗರದ ಹರೂನ್ ಪಾಷಾ (28) ಎಂದು ಗುರುತಿಸಲಾಗಿದೆ.