`ರಾಬ್ತಾ’ ಟ್ರೈಲರಿನಲ್ಲಿ ಸುಶಾಂತ್-ಕೃತಿ ಮ್ಯಾಜಿಕಲ್ ಕೆಮೆಸ್ಟ್ರಿ

ಸುಶಾಂತ್ ಸಿಂಗ್ ರಜಪೂತ್ ಹಾಗೂ ಕೃತಿ ಸನನ್ ಅಭಿನಯದ `ರಾಬ್ತಾ’ ಸಿನಿಮಾದ ಟ್ರೈಲರ್ ಮೊನ್ನೆಯಷ್ಟೇ ಬಿಡುಗಡೆಯಾಗಿದ್ದು ಅದರಲ್ಲಿ ಅವರಿಬ್ಬರ ಅದ್ಭುತ ಕೆಮೆಸ್ಟ್ರಿ ಅನಾವರಣಗೊಂಡಿದೆ. ಟ್ರೈಲರಿನಲ್ಲಿ ಮೊದಲು ಸುಶಾಂತ್-ಕೃತಿ ನಡುವಿನ ರೊಮ್ಯಾನ್ಸ್ ತೋರಿಸಿದರೂ ನಂತರ ಅದು ಹಿಂದಿನ ಜನ್ಮಕ್ಕೆ ಕರೆದುಕೊಂಡು ಹೋಗುತ್ತದೆ. ಈ ಚಿತ್ರದಲ್ಲಿ `ನೀರ್ಜಾ’ ಖ್ಯಾತಿಯ ಜಿಮ್ ಸರ್ಬ್ ಸಹ ವಿಲನ್ ಆಗಿ ಅಭಿನಯಿಸಿದ್ದು ಜನ್ಮಾಂತರದ ಸಂಬಂಧ, ಸೇಡು ಮೊದಲಾದ ಅಂಶವೂ ಟ್ರೈಲರಿನಲ್ಲಿ ಹೈಲೈಟಾಗಿದೆ.

ದಿನೇಶ್ ವಿಜಾನ್ ಮೊದಲ ಬಾರಿಗೆ ಈ ಸಿನಿಮಾದ ಮೂಲಕ ಡೈರೆಕ್ಟರ್ ಕ್ಯಾಪ್ ಧರಿಸಿದ್ದಾರೆ. ನಿಜಜೀವನದಲ್ಲೂ ಡೇಟಿಂಗ್ ಮಾಡುತ್ತಿದ್ದಾರೆ ಎನ್ನಲಾಗಿರುವ ಸುಶಾಂತ್-ಕೃತಿ ತೆರೆಯ ಮೇಲೆ ಮೊದಲ ಬಾರಿಗೆ ಜೊತೆಯಾಗಿ ಕಾಣಿಸಿಕೊಳ್ಳುತ್ತಿರುವುದರಿಂದ ಚಿತ್ರದ ಬಗ್ಗೆ ಸ್ವಾಭಾವಿಕವಾಗಿಯೇ ಕುತೂಹಲವಿದೆ. ದೀಪಿಕಾ ಪಡುಕೋಣೆ ಈ ಸಿನಿಮಾದಲ್ಲಿ ಅತಿಥಿ ಪಾತ್ರದಲ್ಲಿ ನಟಿಸಿದ್ದಾಳೆ. ಸಿನಿಮಾ ಜೂನ್ 9ಕ್ಕೆ ತೆರೆಮೇಲೆ ಬರಲಿದೆ.