ಹೃತಿಕ್ ಹುಟ್ಟುಹಬ್ಬಕ್ಕೆ ಸುಸೇನ್ ಕ್ಯೂಟ್ ವಿಶ್

ಬಾಲಿವುಡ್ಡಿನ ಕ್ಯೂಟೆಸ್ಟ್ ಕಪಲ್ ಆಗಿದ್ದ ಹೃತಿಕ್ ರೋಷನ್-ಸುಸೇನ್ ಖಾನ್ ವಿಚ್ಛೇದನ ಪಡೆದು ಬೇರೆಯಾದರೂ ಅವರ ಒಡನಾಟ ಪತಿ-ಪತ್ನಿರಂತೇ ಮುಂದುವರಿದಿದೆ. ಡೈವೋರ್ಸ್ ಮಾಡಿಕೊಂಡಿದ್ದರೂ ಅವರು ಮಕ್ಕಳ ಜೊತೆ ವಿದೇಶ ಸುತ್ತುವುದು, ಟ್ವಿಟ್ಟರಿನಲ್ಲಿ ಒಬ್ಬರು ಇನ್ನೊಬ್ಬರಿಗೆ ಮನತುಂಬಿ ಶುಭಾಶಯ ಕೋರುವುದು ಎಲ್ಲಾ ನೋಡಿದರೆ ಅವರು ವಿಚ್ಚೇದಿತ ಜೋಡಿ ಎಂದು ಯಾರಿಗೂ ಹೇಳಲು ಸಾಧ್ಯವಿಲ್ಲ.

ಮೊನ್ನೆ ಹೃತಿಕ್ 44ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದು ಸುಸೇನ್ `ಎಂದಿಗೂ, ಎಂದೆಂದಿಗೂ ನೀನೇ ನನ್ನ ಬಾಳಿಗೆ ಸೂರ್ಯ ರಶ್ಮಿ ಇದ್ದಂತೆ.. ಎಂದೆಂದಿಗೂ ನೀನು ನಗುತ್ತಿರು’ ಎಂದು ಶುಭಾಶಯ ಕೋರಿದ್ದಾಳೆ. ಜೊತೆಗೇ ಹೊಸ ವರ್ಷಾಚರಣೆಗೆ ಮಕ್ಕಳೊಂದಿಗೆ ಫ್ರಾನ್ಸ್ ಪ್ರವಾಸದಲ್ಲಿ ತೆಗೆದ ಅವರಿಬ್ಬರ ಕ್ಯೂಟ್ ಫೆÇೀಟೋವೊಂದನ್ನು ಅಪ್ಲೋಡ್ ಮಾಡಿದ್ದಾಳೆ.

 

 

LEAVE A REPLY