ಭಾರತೀಯರು ಸೋಮಾರಿಗಳು ಎಂದ ಸಮೀಕ್ಷೆ

ವಾಹನ ಚಲಾಯಿಸುವುದೇ ಅಥವಾ ನಡೆದು ಸಾಗುವಿರೇ ಎನ್ನುವ ಆಯ್ಕೆಯನ್ನು ಕೊಟ್ಟಾಗ ಬಹಳಷ್ಟು ಮಂದಿ ಭಾರತೀಯರು ಚಿಕ್ಕ ದೂರವನ್ನು ಸಾಗಲು ವಾಹನದಲ್ಲಿ ಹೋಗುವುದನ್ನೇ ಆರಿಸಿದ್ದಾರೆ. 46 ದೇಶಗಳಲ್ಲಿ ನಡೆದ ಸಮೀಕ್ಷೆಯಲ್ಲಿ ಭಾರತವೂ ಸೇರಿತ್ತು. ಜನರು ಕನಿಷ್ಠ 4297 ಹೆಜ್ಜೆಗಳನ್ನೂ ಇಡಲು ಬಯಸದ ಕಾರಣ ಭಾರತ ಸೋಮಾರಿ ಪ್ರಜೆಗಳ ಪಟ್ಟಿಯಲ್ಲಿ 39ನೇ ಸ್ಥಾನದಲ್ಲಿದೆ.

ಬಹಳಷ್ಟು ಸ್ಮಾರ್ಟ್ ಫೋನುಗಳಲ್ಲಿ ಇರುವ ಹೆಜ್ಜೆಗಳ ಲೆಕ್ಕದ ಅಧ್ಯಯನವನ್ನು ನಡೆಸಿದ ಸ್ಟಾಂಡ್ ಫೋರ್ಡ್ ವಿಶ್ವವಿದ್ಯಾಲಯದ ಸಂಶೋಧಕರು ಈ ಸಮೀಕ್ಷೆ ನಡೆಸಿದ್ದಾರೆ. ಸಂಶೋಧಕರು 46 ದೇಶಗಳ 7 ಲಕ್ಷ ಮಂದಿಯನ್ನು ಅಧ್ಯಯನ ಮಾಡಿದ್ದಾರೆ. ಬಹಳಷ್ಟು ಸಕ್ರಿಯವಾಗಿರುವ ಪ್ರಜೆಗಳೆಂದರೆ ಚೀನೀಯರು. ಮುಖ್ಯವಾಗಿ ಹಾಂಗ್ ಕಾಂಗ್ ಜನರು ದಿನಕ್ಕೆ 6,880 ಹೆಜ್ಜೆಗಳನ್ನು ಸರಾಸರಿ ಇಡುತ್ತಾರೆ. ಪಟ್ಟಿಯಲ್ಲಿ ಅತೀ ಕೊನೆಯಲ್ಲಿರುವ ದೇಶವೆಂದರೆ ಇಂಡೋನೇಷ್ಯಾ. ಅವರು ದಿನಕ್ಕೆ 3513 ಹೆಜ್ಜೆಗಳನ್ನೂ ಇಡಲು ಬಯಸಲಿಲ್ಲ. ಮೊದಲ ಅರ್ಧ ಭಾಗದಲ್ಲಿ ಹಾಂಗ್ ಕಾಂಗ್, ಚೀನಾ, ಉಕ್ರೇನ್ ಮತ್ತು ಜಪಾನ್ ಇದೆ. ಅವರು ದಿನಕ್ಕೆ ಸುಮಾರು 6000ಕ್ಕೂ ಹೆಚ್ಚು ಹೆಜ್ಜೆಗಳನ್ನು ಇಡುತ್ತಾರೆ. ಪಟ್ಟಿಯಲ್ಲಿ ಕೊನೆಯ ಸ್ಥಾನ ಪಡೆದಿರುವುದು ಮಲೇಷ್ಯಾ, ಸೌದಿ ಅರೆಬಿಯ ಮತ್ತು ಇಂಡೋನೇಷ್ಯಾ.

ಭಾರತೀಯ ಮಹಿಳೆಯರು ದಿನಕ್ಕೆ 3684 ಹೆಜ್ಜೆಗಳನ್ನು ಇಡುತ್ತಾರಾದರೆ, ಪುರುಷರು 4,606 ಹೆಜ್ಜೆಗಳನ್ನು ಇಡುತ್ತಾರೆ. ಕಡಿಮೆ ಬೊಜ್ಜು ಇರುವ ವ್ಯಕ್ತಿಗಳು ಹೆಚ್ಚು ದೂರವನ್ನು ನಡಿಗೆಯಲ್ಲಿ ಸಾಗುತ್ತಾರೆ ಎಂದೂ ಅಧ್ಯಯನ ಕಂಡುಕೊಂಡಿದೆ. ಆದರೆ ಮಹಿಳೆಯರಲ್ಲಿ ಬೊಜ್ಜು ಹೊಂದಿರುವವವರ ಹೆಜ್ಜೆಗಳ ವೇಗ ಇಳಿಯುತ್ತದೆ.