ಇಂದು ತೆರೆಕಾಣಲಿದೆ ಸುರೇಶ್ ಹೆಬ್ಳೀಕರ್ `ಮನ ಮಂಥನ’

ಸುರೇಶ್ ಹೆಬ್ಳಿಕರ್ ಎಪ್ಪತ್ತು, ಎಂಭತ್ತರ ದಶಕದಲ್ಲಿ `ಆಲೆಮನೆ’, `ಕಾಡಿನ ಬೆಂಕಿ’, `ಪ್ರಥಮ ಉಷಾಕಿರಣ’, `ಆಗುಂತಕ’ ಮುಂತಾದ ಹೆಸರಾಂತ ಚಿತ್ರಗಳನ್ನು ನೀಡಿದ ಬಹುಪ್ರತಿಭೆಯ ನಟ, ನಿರ್ಮಾಪಕ, ನಿರ್ದೇಶಕ. ಅನಂತರ ಇವರು ಚಿತ್ರರಂಗದಿಂದ ದೂರು ಉಳಿದು ಪರಿಸರ ಪ್ರೇಮಿಯಾಗಿ ಇಂದಿಗೂ ಗುರುತಿಸಿಕೊಂಡಿದ್ದಾರೆ.

ಈಗ ಚಿತ್ರರಂಗಕ್ಕೆ ವಾಪಸ್ಸಾಗಿರುವ ಹೆಬ್ಳಿಕರ್ ಯಾವುದೇ ಸದ್ದು ಗದ್ದಲವಿಲ್ಲದೆ `ಮನಮಂಥನ’ ಎಂಬ ಚಿತ್ರವನ್ನು ನಿರ್ದೇಶಿಸಿದ್ದು ಅದು ಇಂದು ತೆರೆ ಕಾಣುತ್ತಿದೆ. ಈ ಸಿನಿಮಾವನ್ನು ಮಾನಸ ಆಟ್ರ್ಸ್‍ಲಾಂಛನದಡಿಯಲ್ಲಿ ಡಾ.ಅಶೋಕ್ ಪೈ ನಿರ್ಮಿಸಿದ್ದಾರೆ. ಚಿತ್ರಕ್ಕೆ ಡಾ. ಕೆ.ಎ. ಅಶೋಕ್ ಪೈ ಕಥೆಯಿದ್ದು, ಚಿತ್ರ ಕಥೆ, ಸಾಹಿತ್ಯ ಸಂಭಾಷಣೆ, ನಿರ್ದೇಶನ ಎಲ್ಲವೂ ಸುರೇಶ್ ಹೆಬ್ಳಿಕರ್ ಅವರದ್ದು.  ತಾರಾಗಣದಲ್ಲಿ ಸುರೇಶ್ ಹೆಬ್ಳಿಕರ್ ಜೊತೆ ರಮೇಶ್ ಭಟ್, ಕಿರಣ್ ರಜಪೂತ್, ಅರ್ಪಿತಾ, ಸಂಗೀತ, ಸುಮನ್, ಶ್ರೀಧರ್,  ಲಕ್ಷಿ ್ಮೀ ಗೋಪಿನಾಥ್ ಮುಂತಾದವರಿದ್ದಾರೆ.