ಚರ್ಚ್ ಕೋರ್ಟಿನ ವಿಚ್ಛೇದನಾ ತೀರ್ಪು ಕಾನೂನುಬಾಹಿರವಾಗಿರಬಾರದು : ಸುಪ್ರೀಂ

ನವದೆಹಲಿ : ಮುಸ್ಲಿಂ ವೈಯಕ್ತಿಕ ಕಾನೂನಿನ್ವಯ ನೀಡಲಾಗುವ ತ್ರಿವಳಿ ತಲಾಖ್ ಮೂಲಕದ ವಿವಾಹ ವಿಚ್ಛೇದನವನ್ನು ನ್ಯಾಯಾಲಯಗಳು ಮಾನ್ಯ ಮಾಡುವಾಗ, ಚರ್ಚ್ ಕಾನೂನುಗಳನ್ನು ಭಾರತೀಯ ಕ್ಯಾಥೋಲಿಕ್ ಸಮುದಾಯದ ವೈಯಕ್ತಿಕ ಕಾನೂನೆಂದು ಏಕೆ ಪರಿಗಣಿಸಬಾರದು ಎಂದು ಪ್ರಶ್ನಿಸಿ ಸುಪ್ರೀಂ ಕೋರ್ಟಿನಲ್ಲಿ 2013ರಲ್ಲಿ ಮಂಗಳೂರಿಗ ಹಾಗೂ ದಕ್ಷಿಣ ಕನ್ನಡ ಕ್ಯಾಥೋಲಿಕ್ ಅಸೋಸಿಯೇಶನ್ನಿನ ಮಾಜಿ ಅಧ್ಯಕ್ಷ ಕ್ಲಾರೆನ್ಸ್ ಪಾಯಸ್ 2013ರಲ್ಲಿ ದಾಖಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ತಳ್ಳಿ ಹಾಕಿದ್ದು ವಿಚ್ಛೇದನಕ್ಕೆ ಸಂಬಂಧಿಸಿದ ಶಾಸನಬದ್ಧ ಕಾನೂನನ್ನು ಚರ್ಚ್ ಕೋರ್ಟುಗಳು ನೀಡುವ ವಿಚ್ಛೇದನ ತೀರ್ಪುಗಳು ತಿರಸ್ಕರಿಸುವಂತಿಲ್ಲ ಎಂದು ಹೇಳಿದೆ.

ಚರ್ಚ್ ಕೋರ್ಟುಗಳು ನೀಡುವ ವಿಚ್ಛೇದನ ತೀರ್ಪುಗಳು ಕಾನೂನುಬದ್ಧ ಎಂದು ಘೋಷಿಸಬೇಕೆದು ಪಾಯಸ್ ಮಾಡಿರುವ ಅಪೀಲನ್ನು ಮುಖ್ಯ ನಾಯಮೂರ್ತಿ ಜೆ ಎಸ್ ಖೇಹರ್ ಹಾಗೂ ಜಸ್ಟಿಸ್ ಡಿ ಚಂದ್ರಚೂಡ್ ಅವರನ್ನೊಳಗೊಂಡ ಪೀಠ ತಿರಸ್ಕರಿಸಿದೆ.

ದ್ವಿಪತ್ನಿತ್ವದ ಆರೋಪ ಹೊತ್ತವರ ವಿರುದ್ಧ ಚರ್ಚು ಕಾನೂನುಗಳನ್ನು ಪರಿಗಣಿಸದೆಯೇ ಐಪಿಸಿಯ ಸೆಕ್ಷನ್ 194 ಅನ್ವಯ  ನ್ಯಾಯಾಲಯಗಳು ಏಕೆ ಕ್ರಮ ಕೈಗೊಳ್ಳುತ್ತಿವೆ ಎಂದು ಅರ್ಜಿದಾರರು ಪ್ರಶ್ನಿಸಿದ್ದರಲ್ಲದೆ “ಇಂತಹ ಪ್ರಕರಣಗಳಲ್ಲಿ ವಿವಾಹ ವಿಧಿಗಳನ್ನು ನರೆವೇರಿಸಿದ ಧಾರ್ಮಿಕ ಗುರುಗಳೂ ಕಾನೂನು ಕ್ರಮ ಎದುರಿಸುವ ಸಾಧ್ಯತೆಯಿದೆ” ಎಂದಿದ್ದರು.

ವಿವಾಹ ವಿಚ್ಛೇದನಕ್ಕಾಗಿ ಚರ್ಚ್ ಕೋರ್ಟುಗಳಲ್ಲಿ ಸಲ್ಲಿಸಲಾದ 100 ಪ್ರಕರಣಗಳು ಮಂಗಳೂರಿನಲ್ಲಿ ಹಾಗೂ 1000 ಅರ್ಜಿಗಳು ಮುಂಬೈಯಲ್ಲಿ ಬಾಕಿಯಿವೆಯೆಂದೂ ಅರ್ಜಿದಾರರು ಹೇಳಿದ್ದರು.

ಹಿರಿಯ ವಕೀಲ ಸೋಲಿ ಸೊರಾಬ್ಜಿ ಈ ಪ್ರಕರಣದಲ್ಲಿ ಕ್ಯಾರೆನ್ಸ್ ಪರವಾಗಿ ವಾದಿಸಿದ್ದರು.