ಸ್ವತಂತ್ರ ಮಹಿಳೆಯ ಪ್ರಾಬಲ್ಯ

ಸ್ವತಂತ್ರ ಹಾಗೂ ನಿರ್ಭೀತ ಮನೋಭಾವದ ಮಹಿಳೆಯೊಬ್ಬಳನ್ನು ನೋಡಿದಾಗ ಆಕೆಯ ಧೈಂiÀರ್iವನ್ನು ಕೊಂಡಾಡದವರಿಲ್ಲ. ಜೀವನದಲ್ಲಿ ಅವಳಿಗೆ ಬೇಕಾಗಿದ್ದೆಲ್ಲವೂ ದೊರಕಿದೆ, ಅವಳಿಗೆ ಎಲ್ಲವೂ ಸಲೀಸು ಎಂಬ ಭಾವನೆಯೂ ಇದೆ. ಆದರೆ ಇಂತಹ ಮಹಿಳೆಯರು ತಮಗೊಪ್ಪುವ ಜೀವನ ಸಂಗಾತಿಯನ್ನು ಹುಡುಕುವುದು ಕಷ್ಟಕರವೆಂಬ ವಾಸ್ತವವನ್ನು ಒಪ್ಪಿಕೊಳ್ಳಲೇಬೇಕು.

  • ಸಂಬಂಧಗಳ ವಿಚಾರ ಬಂದಾಗ ಪುರುಷರು ಯಾವಾಗಲೂ ತಾವೇ ಮೇಲು ಎಂಬ ಸಾಮಾನ್ಯ ಗ್ರಹಿಕೆ ಹೊಂದಿದ್ದಾರೆ. ಪುರುಷರೂ ಅಂತೆಯೇ ನಡೆದುಕೊಳ್ಳುತ್ತಾರೆ. ಹೀಗಿರುವಾಗ ದಿಟ್ಟ ಹಾಗೂ ಸ್ವತಂತ್ರ ಮಹಿಳೆಯೊಬ್ಬಳ ಜತೆ ಸ್ನೇಹ ಬೆಳೆಸುವಾಗ ಅವರು ಸ್ವಲ್ಪ ಹಿಂದೆಮುಂದೆ ಯೋಚಿಸುವುದು ಸಹಜ. ಇಂತಹ ಮಹಿಳೆಯರನ್ನು ಸಂಭಾಳಿಸುವುದು ಹೇಗೆಂಬುದೇ ಹಲವು ಮಂದಿ ಯೋಚಿಸಲಾರಂಭಿಸುತ್ತಾರೆ..
  • ಸ್ವಲ್ಪ ಅಹಂಕಾರಿ ಸ್ವಭಾವದ ಪುರುಷ ಯಾವತ್ತೂ ತನ್ನ ಸಂಗಾತಿಗಿಂತ ತನಗೇ ಹೆಚ್ಚು ಗಮನ ದೊರೆಯಬೇಕೆಂದು ಬಯಸುತ್ತಾನೆ. ಸಂಭಾಷಣೆಯ ಸಂದರ್ಭವೂ ತಾನೇ ಮೇಲುಗೈ ಸಾಧಿಸಬೇಕೆಂಬುದು ಆತನ ಇಚ್ಛೆ. ಆದರೆ ದೃಢ ಮನೋಬಲ ಹೊಂದಿರುವ  ಹಾಗೂ ಆತ್ಮಸ್ಥೈರ್ಯ ಹೊಂದಿರುವ ಮಹಿಳೆಯೊಬ್ಬಳು ಇದನ್ನು ಸಹಿಸುವುದಿಲ್ಲ. ಆಕೆ ಆತನ ತಾಳಕ್ಕೆ ತಕ್ಕಂತೆ ಕುಣಿಯುವ ಬದಲು ತನಗೆ  ಹೇಗೆ ಬೇಕೋ ಹಾಗೆಯೇ ನಡೆದುಕೊಳ್ಳುತ್ತಾಳೆ. ಅಂತಿಮವಾಗಿ ಇದು ಘರ್ಷಣೆಗೆ ಕಾರಣವಾಗಬಹುದು.
  • ಸ್ವತಂತ್ರ ಹಾಗೂ ನಿರ್ಭೀತ ಮಹಿಳೆಯೊಬ್ಬಳು ಪ್ರತಿಯೊಂದಕ್ಕೂ ಪುರುಷನನ್ನೇ ಅವಲಂಬಿಸಲು ಬಯಸುವುದಿಲ್ಲ. ಆದರೆ ತನ್ನ ಸಂಗಾತಿ ಪ್ರತಿಯೊಂದು ವಿಚಾರದಲ್ಲೂ ತನ್ನನ್ನೇ ಅವಲಂಬಿಸಬೇಕೆಂದು  ತಿಳಿಯುವ ಪುರುಷರಿಗೆ ಇದು ಸರಿ ಬಾರದು. ಇದು ಅವರಲ್ಲಿ ಅಭದ್ರತೆಯ ಭಾವನೆಗೆ ಕಾರಣವಾಗುವುದು.
  • ಸ್ವತಂತ್ರ ಮಹಿಳೆರು ಆತ್ಮವಿಶ್ವಾಸದ ಪ್ರತೀಕದಂತಿರುತ್ತಾರೆ. ಅವರು ಜೀವನವನ್ನು ಅತಿಯಾಗಿ ಪ್ರೀತಿಸುತ್ತಾರೆ. ತಮ್ಮ ಆಸೆ ಆಕಾಂಕ್ಷೆಗಳಿಗೆ ತಕ್ಕಂತೆ ವರ್ತಿಸುತ್ತಾರೆ. ಇಂತಹ ಮಹಿಳೆಯೊಬ್ಬಳಿಗೆ ಪುರುಷನೊಬ್ಬ ಸ್ನೇಹಹಸ್ತ ಚಾಚಿದಾಗ ಆತನೊಂದಿಗೆ ಅರ್ಥಪೂರ್ಣ ಸಂಭಾಷಣೆಗಳನ್ನು ನಡೆಸಲು ಸಾಧ್ಯವೇ ಎಂಬುದನ್ನು ಹಾಗೂ ಆತನ ಮನಸ್ಸು, ಅಂತಃಕರಣ ಹಾಗೂ ನಿಜವಾದ ವ್ಯಕ್ತಿತ್ವವನ್ನು ಅರಿಯಲು ಆಕೆ ಬಯಸುತ್ತಾಳೆ.
  • ಸ್ವತಂತ್ರ ಮಹಿಳೆಯೊಬ್ಬಳಿಗೆ ಜೀವನದಲ್ಲಿ ಹಲವು ಆಯ್ಕೆಗಳಿರುತ್ತವೆ. ತಾನು ಯಾರೊಡನೆ ಸ್ನೇಹದಿಂದಿರಬೇಕು, ಯಾರಿಂದ ದೂರವಿರಬೇಕೆಂಬುದನ್ನು ಆಕೆ ಚೆನ್ನಾಗಿಯೇ ಅರಿತಿದ್ದಾಳೆ. ಆಕೆಯ ಕೇಶ ವಿನ್ಯಾಸ ಚೆನ್ನಾಗಿಲ್ಲ, ಆಕೆ ಧರಿಸಿದ ಬಟ್ಟೆ ಆಕೆಗೆ ಹೊಂದುವುದಿಲ್ಲ ಅಥವಾ ಆಕೆಯ ಧೋರಣೆ ನಿಮಗೆ ಹಿಡಿಸಿಲ್ಲವೆಂದು ನೀವೇನಾದರೂ ಆಕೆಗೆ ಹೇಳಲು ಯತ್ನಿಸಿದರೆ ಆಕೆ ಅದನ್ನು ಗಣನೆಗೆ ತೆಗೆದುಕೊಳ್ಳಲಾರಳು ಎಂಬುದನ್ನು ನೆನಪಿಡಿ.  ಆಕೆ ತನ್ನ ಜೀವನವನ್ನು ತಾನೆಂದುಕೊಂಡಂತೆಯೇ, ತನಗೆ ಬೇಕಾದಂತೆಯೇ ಬಾಳಲು ಇಚ್ಛಿಸುವವಳು.