ಹಾಟ್ ಬ್ಯೂಟಿ ಸನ್ನಿಗೆ `ಪೆಟಾ’ ವ್ಯಕ್ತಿ ಪ್ರಶಸ್ತಿ

ಮುಂಬೈ : ಬಾಲಿವುಡ್ ಹಾಟ್ ಹಾಟ್ ಸನ್ನಿ ಲಿಯೋನ್ ನಿರಾಶ್ರಿತ ನಾಯಿ ಮತ್ತು ಬೆಕ್ಕುಗಳಿಗಾಗಿ ನಡೆಸಿದ ಅಭಿಯಾನ ಮತ್ತು ಪ್ರಾಣಿಗಳ ಮಾರಾಟ, ಹತ್ಯೆ ವಿರೋಧಿಸುವ ನೀತಿಯಿಂದಾಗಿ `ಪೆಟಾ’ ವರ್ಷದ ವ್ಯಕ್ತಿಯಾಗಿ ಆಯ್ಕೆಯಾಗಿದ್ದಾರೆ.

ಪ್ರಸಕ್ತ ವರ್ಷದ ಆರಂಭದಲ್ಲಿ 35 ವರ್ಷ ವಯಸ್ಸಿನ ನಟಿ ಸನ್ನಿ, ನಿರಾಶ್ರಿತ ನಾಯಿಯನ್ನು ಸಾಕುವ ಕುರಿತಂತೆ ಜನತೆಯನ್ನು ಉತ್ತೇಜಿಸುವ ಜಾಹೀರಾತಿನಲ್ಲಿ ಪಾಲ್ಗೊಂಡಿದ್ದರು.

ಮಾದಕ ಸೌಂದರ್ಯವನ್ನೇ ಹೊತ್ತುಕೊಂಡು ಧರೆಗಿಳಿದಿರುವ ಸನ್ನಿ ಲಿಯೋನ್, ಅಂತರಂಗದಲ್ಲೂ ತಾವು ಅಷ್ಟೇ ಸೌಂದರ್ಯವತಿ ಎನ್ನುವುದನ್ನು ತೋರಿಸಿಕೊಟ್ಟಿದ್ದಾರೆ ಎಂದು `ಪೆಟಾ’ ಸಂಸ್ಥೆ ಸಂತಸ ವ್ಯಕ್ತಪಡಿಸಿದೆ.

ಹಿರಿಯ ಕಾಂಗ್ರೆಸ್ ನಾಯಕ ಶಶಿ ತರೂರ್, ಸುಪ್ರೀಂಕೋರ್ಟ್ ಮಾಜಿ ನ್ಯಾಯಮೂರ್ತಿ ಕೆ ಎಸ್ ಪಣಿಕರ್ ರಾಧಾಕೃಷ್ಣನ್ ಮತ್ತು ನಟರಾದ ಕಪಿಲ್ ಶರ್ಮಾ, ಹೇಮಾ ಮಾಲಿನಿ, ಆರ್ ಮಾಧವನ್ ಮತ್ತು ಜಾಕ್ವಲೈನ್ ಫರ್ನಾಂಡಿಸ್ ಪೇಟ್ ಪ್ರಶಸ್ತಿ ಪಡೆದವರ ಸಾಲಿನಲ್ಲಿದ್ದಾರೆ.