ತೆಲುಗು ಸಿನಿಮಾದಲ್ಲಿ ಸನ್ನಿ

ಬಾಲಿವುಡ್ ಸೆನ್ಸೇಶನ್ ಸನ್ನಿ ಲಿಯೋನ್ ಮೊದಲ ಬಾರಿಗೆ ತೆಲುಗು ಸಿನಿಮಾವೊಂದರಲ್ಲಿ ನಟಿಸಲಿದ್ದಾಳೆ. ಈಗಾಗಲೇ ದಕ್ಷಿಣದ ಕೆಲವು ಚಿತ್ರಗಳಲ್ಲಿ ಐಟೆಂ ಗರ್ಲಾಗಿ ತನ್ನ ಮಾದಕತೆ ತೋರಿದ ಸನ್ನಿ ಈಗ ಯುದ್ಧ ಸಂಬಂಧೀ ತೆಲುಗು ಚಿತ್ರದಲ್ಲಿ ಅಭಿನಯಿಸುವುದು ಪಕ್ಕಾ ಆಗಿದೆ.

ತೆಲುಗಿನ ಫೇಮಸ್ ಡೈರೆಕ್ಟರ್ ವಿ ಸಿ ವಾದಿಉದಯನ್ ನಿರ್ದೇಶಿಸಲಿರುವ ಈ ಸಿನಿಮಾಗಾಗಿ ಸನ್ನಿ ಈಗಾಗಲೇ ಕುದುರೆ ಸವಾರಿ ಹಾಗೂ ಕತ್ತಿವರಸೆ ಕಲಿಯುತ್ತಿದ್ದಾಳೆ. ಈ ಸಿನಿಮಾದ ಬಗ್ಗೆ ಮಾತಾಡುತ್ತಾ ಸನ್ನಿ “ಈ ಚಿತ್ರ ಖಂಡಿತವಾಗಿಯೂ ನನ್ನ ಇಮೇಜನ್ನೇ ಬದಲಿಸಲಿದೆ. ಆಕ್ಷನ್ ಚಿತ್ರಗಳಲ್ಲಿ ನಟಿಸುವ ಆಸೆ ಕೆಲವು ವರ್ಷಗಳಿಂದಲೇ ಇತ್ತು. ಅದೀಗ ಕೈಗೂಡುತ್ತಿದೆ. ನನಗೆ ದಕ್ಷಿಣದಲ್ಲಿ ಅದರಲ್ಲೂ ಆಂದ್ರ, ಕರ್ನಾಟಕ, ಕೇರಳದಲ್ಲಿ ಸಾಕಷ್ಟು ಅಭಿಮಾನಿಗಳಿದ್ದಾರೆ” ಎಂದು ಎಕ್ಸೈಟಿನಿಂದ ಮಾತಾಡುತ್ತಾಳೆ. ಈ ಸಿನಿಮಾ ತೆಲುಗು ಮಾತ್ರವಲ್ಲದೇ ಹಿಂದಿ, ತೆಲುಗು, ಮಲೆಯಾಳೀ ಭಾಷೆಗಳಿಗೂ ಡಬ್ ಆಗಲಿದೆಯಂತೆ.

ಅಂದ ಹಾಗೆ ಸನ್ನಿಯ ಕಳೆದ ಚಿತ್ರ ಅರ್ಬಾಜ್ ಖಾನ್ ಜೊತೆಗೆ ನಟಿಸಿದ್ದ `ತೆರೆ ಇಂತೆಜಾರ್’ ಪ್ರೇಕ್ಷಕರ ಮನಗೆಲ್ಲುವಲ್ಲಿ ವಿಫಲವಾಗಿತ್ತು.