ರಾಯಲ್ ಚಾಲೆಂಜರ್ಸಗೆ ಮೊದಲ ಆಘಾತ ನೀಡಿದ ಸನ್ ರೈಸರ್ಸ್

ಹೈದರಾಬಾದ್ : ಮುತ್ತಿನ ನಗರಿಯಲ್ಲಿ ಬುಧವಾರ  ಆರಂಭಗೊಂಡ ಐಪಿಎಲ್ ಹತ್ತನೇ ಆವೃತ್ತಿ ಯ ಮೊದಲ ಪಂದ್ಯದಲ್ಲಿ  ಕಳೆದ  ವರ್ಷ  ಪ್ರಶಸ್ತಿ ಗದ್ದಿದ್ದ ಸನ್ ರೈಸರ್ಸ್ ಹೈದರಾಬಾದ್ ತಂಡ 35 ರನ್ ಅಂತರದ ಗೆಲುವು ಪಡೆದಿದೆ.

ಕಳೆದ ಬಾರಿಯ ರನ್ನರ್ಸ್ ಅಪ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮತ್ತೆ  ಸನ್ ರೈಸರ್ಸ್ ತಂಡಕ್ಕೆ ಶರಣಾಗಿದೆ. ಸ್ಟಾರ್ ಆಟಗಾರರು ಆರ್ ಸಿ ಬಿ ತಂಡದಲ್ಲಿದ್ದರೂ ನಾಯಕ  ವಿರಾಟ್ ಕೊಹ್ಲಿ ಸೇರಿದಂತೆ  ಹಲವರು ಗಾಯ ಗೊಂಡಿರುವುದು ತಂಡದ ಸೋಲಿಗೆ ಪ್ರಮುಖ ಕಾರಣ.

ಈ ಪಂದ್ಯದಲ್ಲಿ ಸನ್ ರೈಸರ್ಸ್ ತಂಡದ ಆಟಗಾರರು  ಭರ್ಜರಿ ಬ್ಯಾಟಿಂಗ್ ನಡೆಸಿದರು. ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಸನ್ ರೈಸರ್ಸ್ ಆರಂಭಿಕ ಆಘಾತ ಕಂಡು ನಾಯಕ  ಡೇವಿಡ್  ವಾರ್ನರ್ ಅವರ ವಿಕೆಟ್ ಕಳೆದುಕೊಂಡಿತು.

ಆದರೆ, ಶೀಘ್ರ ಚೇತರಿಕೆಯ ಆಟವನ್ನು  ಶಿಖರ್ ಧವನ್ ಹಾಗೂ ಮೋಯ್ಸೆಸ್ ಹೆನ್ರಿಕ್ಸ್ ಎರಡನೇ ವಿಕೆಟಿಗೆ  74 ರನ್  ಸೇರಿಸಿ ತಂಡವನ್ನು  ಆಧರಿಸಿದರು. ಹೆನ್ರಿಕ್ಸ್ 37 ಎಸೆತಗಳಲ್ಲಿ 52 ರನ್ ಗಳಿಸಿ ಸ್ಪಿನ್ನರ್ ಯಜುವೇಂದ್ರಗೆ ವಿಕೆಟ್  ಒಪ್ಪಿಸಿದರು. ಧವನ್ ಕೂಡ  ಉತ್ತಮ ಆಟ ಪ್ರದರ್ಶಿಸಿ 31 ಎಸೆತಗಳಲ್ಲಿ 40 ರನ್ ಗಳಿಸಿ ಸ್ಟುವರ್ಟ್ ಬಿನ್ನಿಗೆ ಬಲಿಯಾದರು.

ಸನ್ ರೈಸರ್ಸ್ ಪರ ಸ್ಫೋಟಕ ಬ್ಯಾಟಿಂಗ್ ನಡೆಸಿದವರು ಯುವರಾಜ್ ಸಿಂಗ್ ಆರ್ ಸಿ ಬಿ  ತಂಡದ  ಎಲ್ಲಾ ಬೌಲರುಗಳನ್ನು  ನಿರ್ದಯವಾಗಿ ದಂಡಿಸಿದರು. ಕೇವಲ 27 ಎಸೆತಗಳನ್ನು ಎದುರಿಸಿದ ಇವರು 4 ಬೌಂಡರಿ ಹಾಗೂ  3 ಭರ್ಜರಿ  ಸಿಕ್ಸರ್ ಮೂಲಕ  ಹೊಡಿ ಬಡಿಯ 62 ರನ್ ಬಾರಿಸಿದರು. ಅಂತಿಮವಾಗಿ ಸನ್ ರೈಸರ್ಸ್ ತಂಡ 20 ಓವರ್ ಗಳಲ್ಲಿ  4 ವಿಕೆಟಿಗೆ 207 ರನ್ ಗಳಿಸಿತು.

ಬೃಹತ್ ಮೊತ್ತದ ಬೆನ್ನತ್ತಿದ ಆರ್ ಸಿ ಬಿ ಆರಂಭಿಕರಾದ ಕ್ರಿಸ್ ಗೇಲ್ ಹಾಗೂ ಮನದೀಪ್ ಸಿಂಗ್ ಮೊದಲ ವಿಕೆಟಿಗೆ 52 ರನ್ ಸೇರಿಸಿ ಉತ್ತಮ  ಆರಂಭ ನೀಡಿದರು. ಗೇಲ್ 3 ಸಿಕ್ಸರ್  ಜೊತೆಗೆ 32 ರನ್ ಬಾರಿಸಿ ದೀಪಕ್ ಹೂಡ ಬೌಲಿಂಗಿನಲ್ಲಿ ವಾರ್ನರ್ ಹಿಡಿದ  ಅದ್ಭುತ  ಕ್ಯಾಚಿಗೆ ಬಲಿಯಾದರು.  ಮನದೀಪ್ 24ರನ್ ಗಳಿಸಿದರು. ಇವರಿಬ್ಬರು ಔಟಾದ ಬಳಿಕ ತಂಡವನ್ನು ರಕ್ಷಿಸಲು ಯಾರಿಂದಲೂ ಸಾಧ್ಯವಾಗಳಿಲ್ಲ. ಭರವಸೆಯ ಆಟಗಾರ ಕೇದಾರ್ ಜಾಧವ್ 16 ಎಸೆತಗಳಲ್ಲಿ 31 ರನ್ ಗಳಿಸಿ ಮಿಂಚಿದರೂ ವಿಕೆಟ್ ಕಾಯ್ದುಕೊಳ್ಳುವಲ್ಲಿ

ವಿಫಲರಾದರು. ಟ್ರಾವಿಸ್ ಹೆಡ್ ಕೊನೆ ಗಳಿಗೆಯಲ್ಲಿ ಅಬ್ಬರಿಸಿದರೂ ಸೋಲನ್ನು ತಪ್ಪಿಸಲು ಸಾಧ್ಯವಾಗಳಿಲ್ಲ. ಅಂತಿಮವಾಗಿ ಆರ್ ಸಿ ಬಿ  ತಂಡ 172 ರನ್ನುಗಳಿಗೆ ಆಲೌಟಾಯಿತು.

ಸನ್ ರೈಸರ್ಸ್ ಹೈದರಾಬಾದ್ ತಂಡದ ಬೌಲರುಗಳು ಸಂಘಟಿತ ಬೌಲಿಂಗ್ ನಡೆಸಿ ಆರ್‍ಸಿಬಿಯನ್ನು 35 ರನ್ ಅಂತರದಲ್ಲಿ ಸೋಲಿಸಿದರು. ವೇಗದ ಬೌಲರುಗಳಾದ ಆಶಿಶ್ ನೆಹ್ರಾ, ಭುವನೇಶ್ವರ್ ಕುಮಾರ್ ಹಾಗೂ ಅಫ್ಘಾನಿಸ್ಥಾನದ ಯುವ ಸ್ಪಿನ್ ಬೌಲರ್ ತಲಾ ಎರಡೆರಡು ವಿಕೆಟ್  ಪಡೆದು  ಮಿಂಚಿದರು.

ಭರ್ಜರಿ ಬ್ಯಾಟಿಂಗ್  ನಡೆಸಿದ ಯುವರಾಜ್ ಸಿಂಗ್  ಪಂದ್ಯ ಶ್ರೇಷ್ಠ ಪ್ರಶಸ್ತಿ  ಗೆದ್ದುಕೊಂಡರು.