ಬಾವಿಗೆ ಹಾರಿ ಆತ್ಮಹತ್ಯೆ

ಕರಾವಳಿ ಅಲೆ ವರದಿ

ಮುಲ್ಕಿ : ಇಲ್ಲಿನ ಠಾಣಾ ವ್ಯಾಪ್ತಿಯ ಬಳಕುಂಜೆ ಎಂಬಲ್ಲಿ ವ್ಯಕ್ತಿಯೊಬ್ಬರು ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಬಳಕುಂಜೆ ಕಡಮ ನಿವಾಸಿ ಕೇಶವ ಆಚಾರಿ (45) ಮೃತ ವ್ಯಕ್ತಿ. ಮೃತ ವ್ಯಕ್ತಿಯು ಮರದ ಕೆಲಸ ಮಾಡುತ್ತಿದ್ದು, ಸಂಜೆ ಹೊತ್ತು ಕೆಲಸ ಬಿಟ್ಟು ಬಂದು ಬಳಕುಂಜೆ ಸಮೀಪದ ಪಡ್ಪು ಎಂಬಲ್ಲಿರುವ ಶುಭ ಭಂಡಾರಿ ಎಂಬವರ ಮನೆಯ ಹತ್ತಿರ ಇರುವ ಬಾವಿ ಬಳಿಯಲ್ಲಿ ಅನುಮಾನಾಸ್ಪದವಾಗಿ ನಿಂತಿದ್ದ ಎನ್ನಲಾಗಿದೆ. ಬಳಿಕ ಶುಭ ಮನೆಯ ಒಳಗೆ ಹೋದ ಸಂದರ್ಭ ಏಕಾಏಕಿ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ ಮಾನಸಿಕ ಎನ್ನಲಾಗಿದ್ದು, ಕೂಡಲೇ ಶುಭ ಸ್ಥಳೀಯರಿಗೆ ಹಾಗೂ ಬಳಕುಂಜೆ ಗ್ರಾ ಪಂ ಅಧ್ಯಕ್ಷ ದಿನೇಶ್ ಪುತ್ರನರಿಗೆ ತಿಳಿಸಿದ್ದಾರೆ. ಮುಲ್ಕಿ ಪೊಲೀಸರು ಸ್ಥಳಕ್ಕೆ ಆಗಮಿಸಿ ಸ್ಥಳೀಯರ ಸಹಕಾರದೊಂದಿಗೆ ಶವವನ್ನು ಮೆಲಕ್ಕೆತ್ತಿದ್ದು, ತನಿಖೆ ನಡೆಸುತ್ತಿದ್ದಾರೆ.

LEAVE A REPLY