ಸುಯಿ ದಾಗಾ : ವರುಣ್-ಅನುಷ್ಕಾ ಫಸ್ಟ್ ಲುಕ್

ಮೊದಲ ಬಾರಿಗೆ ವರುಣ್ ಧಾವನ್ ಹಾಗೂ ಅನುಷ್ಕಾ ಶರ್ಮಾ ಬೆಳ್ಳೆತೆರೆಯ ಮೇಲೆ `ಸುಯಿ ದಾಗಾ – ಮೇಡ್ ಇನ್ ಇಂಡಿಯಾ’ ಚಿತ್ರದ ಮೂಲಕ ಜೊತೆಯಾಗಲಿದ್ದು ಚಿತ್ರದ ಫಸ್ಟ್ ಲುಕ್ ಈಗ ಬಿಡುಗಡೆಯಾಗಿದೆ. ಚಿತ್ರದಲ್ಲಿ ವರುಣ್-ಅನುಷ್ಕಾ ಚಿಕ್ಕ ಪಟ್ಟಣದ ದಂಪತಿಯಾಗಿ ನಟಿಸಿದ್ದಾರೆ. ವರುಣ್ ಸಿನಿಮಾದಲ್ಲಿ ಮೌಜಿ ಎನ್ನುವ ಟೈಲರ್. ಅನುಷ್ಕಾ ಎಂಬ್ರಾಯಡರಿ ಕೆಲಸ ಮಾಡುವ ಸಾಮಾನ್ಯ ಮಹಿಳೆ ಮಮತಾಳ ಪಾತ್ರದಲ್ಲಿ ರಂಜಿಸಲಿದ್ದಾಳೆ.

ಈ ಸಿನಿಮಾವೊಂದು `ಮೇಕ್ ಇನ್ ಇಂಡಿಯಾ’ ಚಳುವಳಿಯ ಹಿನ್ನೆಲೆಯಲ್ಲಿ ಮೂಡಿಬರಲಿದೆ. ನ್ಯಾಷನಲ್ ಅವಾರ್ಡ್ ವಿನ್ನರ್ ಡೈರೆಕ್ಟರ್ ಶರತ್ ಕಟಾರಿಯಾ ಹಾಗೂ ಪ್ರೊಡ್ಯೂಸರ್ ಮನೀಶ್ ಶರ್ಮಾ ಕಾಂಬಿನೇಶನ್ನಿನಲ್ಲಿ ಚಿತ್ರ ತಯಾರಾಗುತ್ತಿದ್ದು ಸಿನಿಮಾ ಗಾಂಧಿ ಜಯಂತಿಯ ಮುನ್ನ ಅಂದರೆ ಸೆಪ್ಟೆಂಬರ್ 28ರಂದು ಬಿಡುಗಡೆಯಾಗಲಿದೆ.

LEAVE A REPLY