ಚಿತ್ರರಂಗಕ್ಕೆ ಸುಧಾ ಪುತ್ರಿ

ಒಂದು ಕಾಲದಲ್ಲಿ ನಂಬರ್ ಒನ್ ನಟಿಯಾಗಿ ಮೆರೆದಿದ್ದ ಸುಧಾರಾಣಿಯ ಪುತ್ರಿಯೂ ಈಗ ಚಿತ್ರರಂಗಕ್ಕೆ ಎಂಟ್ರಿ ಹೊಡೆಯುತ್ತಿದ್ದಾಳೆ. ಹೌದು, ಸುಧಾ ಪುತ್ರಿ ನಿಧಿ `ಇದು ಚಕ್ರವ್ಯೂಹ’ ಎನ್ನುವ ಸಿನಿಮಾದ ಮೂಲಕ ಸ್ಯಾಂಡಲ್ವುಡ್ಡಿಗೆ ಕಾಲಿಡುತ್ತಿದ್ದಾಳೆ.

ಸುಧಾರಾಣಿ ತನ್ನ 12 ನೇ ವಯಸ್ಸಿನಲ್ಲಿಯೇ ಬಣ್ಣದ ಲೋಕಕ್ಕೆ ಕಾಲಿಟ್ಟಿದ್ದು `ಆನಂದ್’ ಸಿನಿಮಾದ ಮೂಲಕ ನಾಯಕಿಯಾಗಿ ನಟಿಸಿದ್ದು ನಂತರ ಹಲವಾರು ಚಿತ್ರಗಳ ಮೂಲಕ ಕನ್ನಡಿಗರ ಮನೆಮಗಳಂತಾಗಿದ್ದಳು. ಇದೀಗ ಆಕೆಯ ಪುತ್ರಿ ನಿಧಿ ಈಗ 17ನೇ ವಯಸ್ಸಿನಲ್ಲಿದ್ದು ಆಕೆಯೂ ದೊಡ್ಡ ಪರದೆ ಮೇಲೆ ಮಿಂಚಲು ರೆಡಿಯಾಗಿದ್ದಾಳೆ. ವಿಶೇಷವೆಂದರೆ ನಿಧಿ ನಟಿಸಲಿರುವ `ಇದು ಚಕ್ರವ್ಯೂಹ’ ಸಿನಿಮಾದಲ್ಲಿ ಸುಧಾರಾಣಿಯೇ ನಿಧಿ ಅಮ್ಮನ ಪಾತ್ರದಲ್ಲಿ ನಟಿಸಲಿದ್ದಾಳೆ.

ಈ ಮೊದಲು ಅಮ್ಮ-ಮಗಳು ಜಾಹೀರಾತೊಂದರಲ್ಲಿ ಜೊತೆಯಾಗಿದ್ದರು. ಇದೀಗ ಅವರು ಜೊತೆಯಾಗಿ ದೊಡ್ಡ ಪರದೆ ಮೇಲೆ ಬರಲಿದ್ದಾರೆ.