ಸುದೀಪ್ ನಾಯಕಿಯಾಗಿ ಶ್ರುತಿ ಹರಿಹರನ್

ಸುದೀಪ್ ಹಾಗೂ ರೆಬೆಲ್ ಸ್ಟಾರ್ ಅಂಬರೀಶ್ ಅಭಿನಯದ `ಅಂಬಿ ನಿಂಗ್ ವಯಸ್ಸಾಯ್ತೋ’ ಚಿತ್ರದಲ್ಲಿ ಸುದೀಪ್ ನಾಯಕಿಯಾಗಿ ಶ್ರುತಿ ಹರಿಹರನ್ ನಟಿಸುವುದು ಪಕ್ಕಾ ಆಗಿದೆ. ಅಂದ ಹಾಗೆ ಸುಹಾಸಿನಿ ಅಂಬರೀಶ್ ಸಂಗಾತಿಯಾಗಿ ಅಭಿನಯಿಸಲಿದ್ದಾರೆ.

ಶ್ರುತಿ ಹರಿಹರನ್ ಈಗ ಬಿಡುವಿಲ್ಲದ ನಟಿ. ಹೇಳುವಷ್ಟು ಗ್ಲಾಮರಸ್ ಅಲ್ಲದಿದ್ದರೂ ಶ್ರುತಿ ತನ್ನ ನಟನೆಯಿಂದಲೇ ಕನ್ನಡಿಗರ ಮನಗೆದ್ದ ಅಪರೂಪದ ನಟಿ. ಕನ್ನಡವಲ್ಲದೇ ಮಲೆಯಾಳಂ, ತಮಿಳು ಚಿತ್ರಗಳಲ್ಲಿಯೂ ಈಗಾಗಲೇ ನಟಿಸುತ್ತಿರುವ ಶ್ರುತಿ ತೆಲುಗು ಚಿತ್ರವೊಂದರಲ್ಲೂ ನಟಿಸಲು ಆಯ್ಕೆಯಾಗಿದ್ದು ಇದೀಗ ಚತುರ್ಭಾಷಾ ನಟಿ ಎನಿಸಿಕೊಳ್ಳುತ್ತಿದ್ದಾಳೆ.

ಶ್ರುತಿ ನಟನೆಯ ಸಾಲುಸಾಲು ಚಿತ್ರಗಳು ಕೆಲವು ಚಿತ್ರೀಕರಣದ ಹಂತದಲ್ಲಿದ್ದರೆ ಇನ್ನು ಕೆಲವು ಬಿಡುಗಡೆಗಾಗಿ ಕಾಯುತ್ತಿವೆ. `ಅಂಬಿ ನಿಂಗ್ ವಯಸ್ಸಾಯ್ತೋ’ ಸಿನಿಮಾಗೆ ಯುವ ನಿರ್ದೇಶಕ ಗುರು ಗಾಣಿಗ ಆಕ್ಷನ್ ಕಟ್ ಹೇಳಲಿದ್ದಾರೆ.