ಬಾರುಗಳಲ್ಲಿ ಕಳಪೆ ಮದ್ಯ ಅಬಕಾರಿ ಇರೋದ್ಯಾಕೆ

ರಾಷ್ಟ್ರೀಯ ಹೆದ್ದಾರಿ ಬದಿ ಕಾರ್ಯಾಚರಿಸುತ್ತಿದ್ದ ಬಾರ್, ವೈನ್ ಶಾಪುಗಳು ಸುಪ್ರೀಂ ಕೋರ್ಟ್ ಆದೇಶದಿಂದ ಒಂದೊಮ್ಮೆ ಮುಚ್ಚುಗಡೆಗೊಂಡಿದ್ದು, ಆದೇಶ ಹಿಂತೆಗೆತ ಆಗುತ್ತಿದ್ದಂತೆಯೇ ಬಂದ್ ಆಗಿದ್ದ ಬಾರುಗಳು ಒಂದೊಂದಾಗಿ ತೆರೆದುಕೊಳ್ಳತೊಡಗಿದೆ
ಹೀಗೆ ಓಪನ್ ಆದ ಬಾರ್ ವೈನ್ ಶಾಪುಗಳಲ್ಲಿ ಕುಡಿಯಲು ಬರುವ ಗಿರಾಕಿಗಳಿಗೆ ನೀಡುತ್ತಿರುವ ಮದ್ಯದ ಬಗ್ಗೆ ದೂರು ಬರತೊಡಗಿದೆ. ಮುಚ್ಚುಗಡೆ ಆಗುವುದಕ್ಕಿಂತ ಮೊದಲು ನೀಡುತ್ತಿದ್ದ ವಿವಿಧ ತರಹದ ಮದ್ಯಕ್ಕೂ ಈಗ ನೀಡುತ್ತಿರುವ ಮದ್ಯದ ರುಚಿಯಲ್ಲಿ ಯಾಕೋ ಬದಲಾವಣೆ ಕಂಡು ಬರುತ್ತಿದ್ದು ಕುಡಿದವರು ಮೋಸಕ್ಕೆ ಒಳಗಾಗುತ್ತಿರುವುದು ಕಂಡು ಬರುತ್ತಿದೆ ಕ್ವಾರ್ಟರ್ ಬಿಪಿಗೆ ಕೆಲವೆಡೆ 100 ಇನ್ನು ಕೆಲವು ಕಡೆ 95, 90 ಹೀಗೆ ಒಂದೊಂದು ಕಡೆ ಒಂದೊಂದು ದರ ಗಿರಾಕಿಗಳಿಂದ ಪಡೆಯುತ್ತಿದ್ದಾರೆ ಅದೇ ರೀತಿ ಕ್ವಾಟರ್ ಓಸಿ ಚಾಯ್ಸ್ ಎಂಎಲ್ ಕ್ವಾಟರಿಗೂ ಒಂದೊಂದು ದರವನ್ನು ವಿಧಿಸಿ ಗಿರಾಕಿಗಳ ತಲೆ ಬೋಳಿಸುತ್ತಿದ್ದಾರೆ ಹೆಚ್ಚು ಹಣ ತೆತ್ತು ಕುಡಿದವರು ಮರುದಿನ ತಲೆಭಾರ ಎಂದಿನಂತೆ ಉಲ್ಲಾಸ ಇರದಂತೆ ಆಗುತ್ತಿದೆ ಗಿರಾಕಿಗಳ ಆರೋಗ್ಯ ಕೆಡುತ್ತಿದೆಯಾದರೆ ಬಾರಿನವರು ಡುಪ್ಲಿಕೇಟ್ ಮದ್ಯ ವಿತರಿಸುತ್ತಿದ್ದಾರೆಯೇ ಎಂಬ ಅನುಮಾನ ಕಾಡ ತೊಡಗಿದೆ ಬಾರ್ ಮುಚ್ಚುಗಡೆಯಾಗುವ ಮುಂಚೆ ಇದೇ ವಿವಿಧ ಮಾದರಿಯ ಮದ್ಯ ಕುಡಿದವರಿಗೆ ಏನೂ ಸಮಸ್ಯೆ ಆಗದಿರುವಾಗ ಈಗ ಯಾಕೆ ಹೀಗೆ ಆಗುತ್ತಿದೆ ಅಬಕಾರಿ ಇಲಾಖೆ ಅಧಿಕಾರಿಗಳಿಗೆ ಗೊತ್ತಿದ್ದೂ ನಕಲಿ ಮದ್ಯ ಮಾರಾಟ ಮಾಡುತ್ತಿದ್ದಾರೆಯೇ ಮದ್ಯದ ಪರಿಸ್ಥಿತಿ ಹೀಗಾದರೆ ಗಿರಾಕಿಗಳಿಗೆ ಕೊಡುವ ಆಹಾರದ ಗುಣಮಟ್ಟವೂ ತೀರಾ ಕಳಪೆ ಇನ್ನು ವಿವಿಧ ನಮೂನೆ ಮಾಂಸದ ಖಾದ್ಯಗಳ ಗುಣಮಟ್ಟವೂ ಅಷ್ಟಕಷ್ಟೆ ಹಾಗಂತ ದರ ಮಾತ್ರ ಕಡಿಮೆಯೇನೂ ಇಲ್ಲ ಎರಡು ತಿಂಗಳು ಬಾರ್ ಬಂದಿನಿಂದ ಆದ ನಷ್ಟ ಸರಿದೂಗಿಸಲೆಂದು ಗಿರಾಕಿಗಳಿಗೆ ಕಳಪೆ ಮದ್ಯ, ಆಹಾರ ನೀಡಿ ವಂಚಿಸುತ್ತಿದ್ದಾರೆಯೇ ಅಬಕಾರಿ ಇಲಾಖೆ ಗಮನಿಸಲಿ

  • ಎಂ ಕರುಣಾಕರ ಸಾಲ್ಯಾನ್  ಇಡ್ಯಾ ಸುರತ್ಕಲ್