ಚಿಪ್ಪುಮೀನುಗಳ ತಳಪಾಯ, ನೀರಿನ ಪಾಚಿಯ ನಿಗದಿತ ಪರೀಕ್ಷೆ ಅವಶ್ಯ : ವಿಜ್ಞಾನಿಗಳ ಅಭಿಮತ

ನಮ್ಮ ಪ್ರತಿನಿಧಿ ವರದಿ

 ವಿಷಯುಕ್ತ ಪದಾರ್ಥಗಳಿಂದ ಕೂಡಿರುವ ಚಿಪ್ಪುಮೀನುಗಳ ತಳಪಾಯಗಳ ಮೇಲೆ ನಿರಂತರ ನಿಗಾ ಇಡಬೇಕೆಂದಿರುವ ವಿಜ್ಞಾನಿಗಳು, ಇತ್ತೀಚೆಗೆ ಮೀನುಗಳ ತಲೆ ತಿಂದಿರುವ ಉಳ್ಳಾಲದ ಮಿಶ್ ಮೀಲ್ ಕಂಪೆನಿಯೊಂದರ 100ಕ್ಕೂ ಹೆಚ್ಚು ಅಸ್ವಸ್ಥಗೊಂಡ ಕಾರ್ಮಿಕರ ನಿದರ್ಶನ ಮುಂದಿಟ್ಟರು.

“ಇಂತಹ ಚಿಪ್ಪುಮೀನುಗಳ ಸಾಂದ್ರತೆಯಿಂದ ನೀರಿನಲ್ಲಿ ವಿಷಕಾರಿ ಪಾಚಿ ಉತ್ಪತ್ತಿಯಾಗುತ್ತಿದ್ದು, ಇದನ್ನು ನಿರಂತರ ಗಮನಿಸಬೇಕು. ಯಾಕೆಂದರೆ ಇದು ಸಾರ್ವಜನಿಕ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ” ಎಂದು ನಿಟ್ಟೆ ಯೂನಿವರ್ಸಿಟಿಯ ಜೀವಶಾಸ್ತ್ರ ವಿಭಾಗದ ಡೀನ್ ಡಾ ಇಂದ್ರಾಣಿ ಕರುಣಾಸಾಗರ್ ತಿಳಿಸಿದರು.

ಚಿಪ್ಪುಮೀನುಗಳು ಕೊಯ್ಲು ಜಾಸ್ತಿ ಇರುವಲ್ಲಿ ಪ್ರತಿ 15 ದಿನಕ್ಕೊಂದು ಬಾರಿ ವಿಷಕಾರಿ ಮಟ್ಟದ ಪರೀಕ್ಷೆ ನಡೆಸಬೇಕು. ಇಲ್ಲವಾದಲ್ಲಿ ಈ ಭಾಗದ ಮೀನುಗಳು ವಿಷಯುಕ್ತ ಪಾಚಿ ಸೇವಿಸಿ ವಿಷಕಾರಿಯಾಗುವ ಸಾಧ್ಯತೆ ಹೆಚ್ಚಿದೆ ಎಂದರು.

“ಒಂದೊಮ್ಮೆ ವಿಷಕಾರಿ ಅಂಶ ಪತ್ತೆಯಾದಲ್ಲಿ ಈ ಭಾಗದಲ್ಲಿ ವಿಷಕಾರಿ ಸೊತ್ತು ನಾಶವಾಗುವವರೆಗೆ ಅವುಗಳ ಮೀನುಗಳನ್ನು ಸೇವಿಸಿದಂತೆ ಜನರಿಗೆ ಸಲಹೆ ನೀಡಬೇಕು. ಸಾರ್ವಜನಿಕ ಆರೋಗ್ಯದ ದೃಷ್ಟಿಯಿಂದ ಹೀಗೆ ಮಾಡುವುದು ಅತ್ಯಗತ್ಯ” ಎಂದು ಡಾ ಇಂದ್ರಾಣಿ ವಿವರಿಸಿದರು.

ವಿಷಕಾರಿ ಪಾಚಿ ಇರುವ ಭಾಗದ ನೀರಿನ ಪರೀಕ್ಷೆ ಅವಶ್ಯವಾಗಿ ಮಾಡಬೇಕು ಎಂದರು.

“ಚಿಪ್ಪು ಮೀನುಗಳಿರುವಲ್ಲಿನ ಮೀನುಗಳ ತಲೆ ಮತ್ತು ಒಳಾಂಗಗಳಲ್ಲಿ (ಯಕೃತ್ ಮೊದಲಾದ ಅಂಗ) ವಿಷಕಾರಿ ಅಂಶ ಕೇಂದ್ರೀಕೃತವಾಗಿರುತ್ತದೆ. ಇದು ಅವುಗಳಲ್ಲಿ ಸುಮಾರು ಸಮಯದಿಂದ ಸಂಚಯಗೊಂಡಿತ್ತದೆ” ಎಂದು ಆ ವಿಜ್ಞಾನಿ ವಿವರಿಸಿದರು.

ದೊಡ್ಡ ಮೀನುಗಳಲ್ಲಿ ಈ ವಿಷಕಾರಿ ಅಂಶ ಹೆಚ್ಚು ಸಂಚಯಗೊಂಡಿರುತ್ತದೆ ಎಂದು ಎಚ್ಚರಿಸಿದರು.

ಆದ್ದರಿಂದ 2 ಕಿಲೋಗಿಂತ ಹೆಚ್ಚು ತೂಕದ ಮೀನುಗಳಾದ ಕಿಂಗ್-ಫಿಶ್, ರೆಡ್-ಸ್ನ್ಯಾಪರ್ ಮತ್ತು ಬಾರಕ್ಯೂಡಾದಂತಹ ಮೀನುಗಳನ್ನು ಸೇವನೆಯಿಂದ ಹೊರಗಿಡಬೇಕು ಎಂದರು.