ಹಾಸ್ಟೆಲಿನಲ್ಲಿ ವಿದ್ಯಾರ್ಥಿ ಘರ್ಷಣೆ

ಸಾಂದರ್ಭಿಕ ಚಿತ್ರ

ಕಾಸರಗೋಡು : ಎಲ್ಬಿಎಸ್ ಇಂಜಿನಿಯರಿಂಗ್ ಕಾಲೇಜಿನ ಚೆರ್ಕಳ ಬೇರ್ಕಡವಿನಲ್ಲಿರುವ ಹಾಸ್ಟೆಲಿನಲ್ಲಿ ಎಸ್ಸೆಸ್ಸೆಫೈ ಮತ್ತು ಎಂಎಸ್ಸೆಫ್ ಕಾರ್ಯಕರ್ತರ ಮಧ್ಯೆ ಘರ್ಷಣೆ ನಡೆದಿದೆ.

ಘರ್ಷಣೆಯಿಂದ ಎಸ್ಸೆಸ್ಸೆಫೈ ಕೃಷ್ಣನ್, ನಂದನ್ ಗಾಯಗೊಂಡಿದ್ದಾರೆ. ಈ ಸಂಬಂಧ ಎಂಎಸ್ಸೆಫ್ ವಿದ್ಯಾರ್ಥಿಗಳಾದ ಸಲ್ಮಾನ್, ಹರ್ಷಾದ್, ಮೊಹಮ್ಮದ್ ಸುಹೈಲ್ ಮತ್ತು ಫಾರೀಸ್ ವಿರುದ್ಧ ವಿದ್ಯಾನಗರ ಪೆÇಲೀಸರು ಕೇಸು ದಾಖಲಿಸಿದ್ದಾರೆ.