ವಿದ್ಯಾರ್ಥಿನಿಗೆ ಕಿರುಕುಳ : ಉದ್ರಿಕ್ತ ವಿದ್ಯಾರ್ಥಿಗಳಿಂದ ಅಧ್ಯಾಪಕಗೆ ಹಲ್ಲೆ

ಸಾಂದರ್ಭಿಕ ಚಿತ್ರ

ನಮ್ಮ ಪ್ರತಿನಿಧಿ ವರದಿ

ಮಂಜೇಶ್ವರ : ಖಾಸಗಿ ಕಾಲೇಜೊಂದರ ವಿದ್ಯಾರ್ಥಿನಿಗೆ ಕಿರುಕುಳ ನೀಡಿದ್ದರಿಂದ ಉದ್ರಿಕ್ತರಾದ ವಿದ್ಯಾರ್ಥಿಗಳು ಒಟ್ಟು ಸೇರಿ ಅಧ್ಯಾಪಕಗೆ ಥಳಿಸಿದ ಘಟನೆ ಕುಂಬಳೆಯಲ್ಲಿ ನಡೆದಿದೆ.

ಬಳಿಕ ಘಟನೆಯ ಮಾಹಿತಿ ತಿಳಿದು ಆಗಮಿಸಿದ ಪೆÇೀಲೀಸರು ಅಧ್ಯಾಪಕನನ್ನು ವಶಕ್ಕೆ ತೆಗೆದುಕೊಂಡರು.

ಬದಿಯಡ್ಕ ರಸ್ತೆಯಲ್ಲಿ ಕಾರ್ಯಾಚರಿಸುವ ಖಾಸಗಿ ಕಾಲೇಜಿನಲ್ಲಿ ಈ ಘಟನೆ ನಡೆದಿದೆ. ಬುಧವಾರ ಅಪರಾಹ್ನ ಅಧ್ಯಾಪಕನೊಬ್ಬ ಕಾಲೇಜಿನ ವಿದ್ಯಾರ್ಥಿನಿಯನ್ನು ಮನೆಗೆ ಪುಸಲಾಯಿಸಿ ಕರೆದೊಯ್ಯುತ್ತಿರುವುದನ್ನು ತಿಳಿದು ಅವರನ್ನು ಹಿಂಬಾಲಿಸಿದ ವಿದ್ಯಾರ್ಥಿಗಳ ತಂಡ ಮನೆ ತಲಪುತ್ತಿರುವಂತೆ ಶಿಕ್ಷಕಗೆ ಹಿಗ್ಗಾಮುಗ್ಗ ಥಳಿಸಿದರು. ಬಳಿಕ ಘಟನೆ ತಿಳಿದು ಆಗಮಿಸಿದ ಪೆÇಲೀಸರು ವಿದ್ಯಾರ್ಥಿಗಳನ್ನು ಸಮಾಧಾನಗೊಳಿಸಿ ಅಧ್ಯಾಪಕನನ್ನು ವಶಕ್ಕೆ ಪಡೆದಿದ್ದು, ಘಟನೆಯ ಕೂಲಂಕಶ ತನಿಖೆ ನಡೆಸುವುದಾಗಿ ಪೆÇಲೀಸರು ಭರವಸೆ ನೀಡಿದರು.