ವಿದ್ಯಾರ್ಥಿ ಜೀವನ ಪವಿತ್ರವಾದುದು

ತಂದೆ ತಾಯಿ ಗುರು ಹಿರಿಯರ ಶೇಷ್ಠ ಮಾರ್ಗದರ್ಶನದಲ್ಲಿ ವಿದ್ಯೆ ಸಂಸ್ಕøತಿಯನ್ನು ತಾಳ್ಮೆಯಿಂದ ಕಲಿತು ದೇಶಕ್ಕೆ ಶಾಲೆಗೆ ಸಮಾಜಕ್ಕೆ ಒಳ್ಳೆಯ ಹೆಸರು ತರಬೇಕು ವಿನಾಶಕಾರಿ ಪ್ರವೃತ್ತಿ ಬೇಡ ಪ್ರೀತಿ ಮಾಡಬಾರದು ಮಾಡಿದರೆ ನಡುವೆ ಅಂತರ ಇರಲಿ ಮುಂದೆ ಯಾವುದೇ ಅಪಾಯಕ್ಕೆ ಸಿಲುಕಲು ಸಾಧ್ಯವೇ ಇಲ್ಲ ತಾಯಿ ತಂದೆಯರಲ್ಲಿ ಪ್ರೀತಿ ಇರಲಿ ದೇವರಲ್ಲಿ ನಂಬಿಕೆ ಇರಲಿ ಇನ್ನೊಬ್ಬರ ದುಃಖ ನಮ್ಮ ದುಃಖ ಎಂದು ತಿಳಿಯಿರಿ ಸುಖ ದುಃಖಗಳನ್ನು ಸಮನಾಗಿ ಸ್ವೀಕರಿಸಿ ಬಾಳಿರಿ ನಿಮ್ಮತನ ಹಕ್ಕುಗಳನ್ನು ಬಿಟ್ಟುಕೊಡಬೇಡಿ ಅಪಾಯ ಸಮಯದಲ್ಲಿ ಧೈರ್ಯದಿಂದ ಹೋರಾಡಿ ತಪ್ಪಿತಸ್ಥರಿಗೆ ಶಿಕ್ಷೆಯಾಗಲಿ ಪವಿತ್ರವಾದ ವಿದ್ಯಾರ್ಥಿ ಜೀವನ ನಮಗೆ ಸಿಗುವುದು ಜೀವಮಾನದಲ್ಲಿ ಒಮ್ಮೆ ಮಾತ್ರ ವಿದ್ಯಾರ್ಥಿ ನಿಲಯಗಳ ಪವಿತ್ರತೆಯನ್ನು ಕಾಪಾಡಿರಿ ಕೊನೆಗೊಂದು ಮಾತು ವಿದ್ಯೆ ಇದ್ದರೆ ಸಾಲದು ತಾಳ್ಮೆಗಳು ಇರಲಿ ಆಗ ಮಾತ್ರ ಎಲ್ಲರೂ ನಿಮ್ಮನ್ನು ಗೌರವ ದೃಷ್ಟಿಯಿಂದ ನೋಡುತ್ತಾರೆ ನೆನಪಿರಲಿ

  • ಜಿ ಶ್ರೀಧರ್ ರಾವ್  ಬ್ರಹ್ಮಗಿರಿ  ಉಡುಪಿ