ಸಮುದ್ರಪಾಲಾಗುತ್ತಿದ್ದ ವಿದ್ಯಾರ್ಥಿಯ ರಕ್ಷಣೆ

ನಮ್ಮ ಪ್ರತಿನಿಧಿ ವರದಿ

ಭಟ್ಕಳ : ಪ್ರವಾಸಕ್ಕೆಂದು ಇಲ್ಲಿನ ಮುರ್ಡೇಶ್ವರ ಕಡಲತೀರಕ್ಕೆ ರವಿವಾರ ಬಂದು ಈಜುವ ವೇಳೆ ಸಮುದ್ರದಲ್ಲಿ ಕೊಚ್ಚಿ ಹೋಗುತ್ತಿದ್ದ ವಿದ್ಯಾರ್ಥಿಯನ್ನು ಲೈಫ್ ಗಾರ್ಡ್ ಸಿಬ್ಬಂದಿ ರಕ್ಷಿಸಿದ್ದಾರೆ.

ಶಿವಮೊಗ್ಗ ಜಿಲ್ಲೆಯ ರಾಘವೇಂದ್ರ ಪ್ಯಾರಾ ಮೆಡಿಕಲ್ ಕಾಲೇಜಿನ ಗಗನ್ ರಕ್ಷಿಸಲ್ಪಟ್ಟ ವಿದ್ಯಾರ್ಥಿ. ರವಿವಾರ ಪ್ರವಾಸಕ್ಕೆಂದು 15 ಜನ ವಿದ್ಯಾರ್ಥಿಗಳು ಶಿವಮೊಗ್ಗದಿಂದ ಮುರ್ಡೇಶ್ವರಕ್ಕೆ ಬಂದಿದ್ದು, ಈತ ಸಮುದ್ರದಲ್ಲಿ ಈಜುವಾಗ ಅಲೆಗಳ ಹೊಡೆತಕ್ಕೆ ಸಿಲುಕಿ ಕೊಚ್ಚಿ ಹೋಗಿದ್ದಾನೆ. ಇದನ್ನು ಗಮನಿಸಿದ ಕಡಲತೀರದಲ್ಲಿದ್ದ ಲೈಫ್ ಗಾರ್ಡ್ ಸಿಬ್ಬಂದಿ ರೋಹಿತ ಹರಿಕಾಂತ, ಶಶಿಧರ ಹಾಗೂ ಬೋಟ್ ಸಿಬ್ಬಂದಿ ಈತನನ್ನು ರಕ್ಷಿಸಿದ್ದಾರೆ. ಸ್ಥಳಕ್ಕೆ ಪ್ರವಾಸೋದ್ಯಮ ಅಧಿಕಾರಿ ರವಿ ವಾಲೇಕರ್ ಭೇಟಿ ನೀಡಿ ಮಾಹಿತಿ ಪಡೆದುಕೊಂಡಿದ್ದಾರೆ. ವಿದ್ಯಾರ್ಥಿಗಳನ್ನು ಮುರ್ಡೇಶ್ವರ ಠಾಣೆಗೆ ಕರೆಸಿ ಬುದ್ಧಿ ಹೇಳಿ ಕಳುಹಿಸಿದ್ದಾರೆ.

LEAVE A REPLY