ಮಕ್ಕಳಿಗೆ ಸನ್ನಡತೆ ಕಲಿಸಲು ಸ್ಟೂಡೆಂಟ್ ಪೆÇಲೀಸ್ ಕೆಡೆಟ್

ನವಜೀವನ ಶಾಲಾ ಎಸ್ ಪಿ ಸಿ ಘಟಕಕ್ಕೆ ಚಾಲನೆ ನೀಡುತ್ತಿರುವ ಜಿಲ್ಲಾ ಪೆÇಲೀಸ್ ವರಿಷ್ಟ ಥಾಮ್ಸನ್

ನಮ್ಮ ಪ್ರತಿನಿಧಿ ವರದಿ

ಕಾಸರಗೋಡು : ಎಳವೆಯಲ್ಲಿಯೇ ಮಕ್ಕಳಿಗೆ ಸನ್ನಡೆತೆ ಕಲಿಸುವ ವ್ಯವಸ್ಥೆ ಶಾಲೆಗಳಲ್ಲಿ ಆಗುತ್ತಿದೆ. ಆದರೆ ಬಾಹ್ಯ ಕೆಟ್ಟ ಹವ್ಯಾಸಗಳಾದ ಮಾದಕ ದ್ರವ್ಯ, ಮದ್ಯಪಾನ, ಧೂಮಪಾನ, ಜಾತಿ-ಮತಗಳ ಮೂಲಕ ಸಮಾಜ ಒಡೆಯುವ ಘಾತಕ ಶಕ್ತಿಗಳ ವಿವಿಧ ಆಮಿಷಗಳಿಗೆ ಮಕ್ಕಳು ಬಲಿಯಾಗುತ್ತಿದ್ದಾರೆ. ಸ್ಟುಡೆಂಟ್ ಪೆÇಲೀಸ್ ಪೆÇ್ರೀಜೆಕ್ಟ್ ಮಕ್ಕಳಿಗೆ ವ್ಯಕ್ತಿತ್ವ ವಿಕಸನದ ವಿಶೇಷ ತರಬೇತಿ ನೀಡಿ ಇತರ ಮಕ್ಕಳೂ ಇವರನ್ನನುಸರಿಸುವಂತೆ ಮಾಡುವುದು ಕೇರಳದ ಸರಕಾರದ ಉದ್ದೇಶ. ಎಸ್ ಪಿ ಸಿ ಮಕ್ಕಳು ಸಮಾಜದ ಬೆಳಕಾಗಲಿ ಎಂದು ಕಾಸರಗೋಡಿನ ಪೆÇಲೀಸ್ ವರಿಷ್ಟಾಧಿಕಾರಿ ಥಾಮ್ಸನ್ ಜೋಸ್ ಹೇಳಿದರು.

ಅವರು ನವಜೀವನ ಹೈಯರ್ ಸೆಕೆಂಡರಿ ಪೆರಡಾಲದಲ್ಲಿ ಕೇರಳ ಸರಕಾರದಿಂದ ಆರಂಭಗೊಂಡ ಎಸ್ ಪಿ ಸಿ ಪೆÇ್ರಜೆಕ್ಟ್ ಶಾಲಾ ಘಟಕಕ್ಕೆ ಚಾಲನೆ ನೀಡಿ ಮಾತನಾಡುತ್ತಿದ್ದರು.

ಈ ಸಂದರ್ಭ ಜನಪ್ರತಿನಿಧಿಗಳು, ಶಾಲಾ ಅಧ್ಯಾಪಕರು, ಪೋಷಕರು ಸೇರಿದಂತೆ ಹಲವಾರು ಮಂದಿ ಪಾಲ್ಗೊಂಡರು.