ಕಾರು ಗುದ್ದಿ ವಿದ್ಯಾರ್ಥಿ ಆಸ್ಪತ್ರೆಗೆ

ನಮ್ಮ ಪ್ರತಿನಿಧಿ ವರದಿ

ಶಿರಸಿ : ಇಲ್ಲಿನ ಕಾಲೇಜು ರಸ್ತೆಯಲ್ಲಿ ಸೋಮವಾರ ನಡೆದು ಹೋಗುತ್ತಿದ್ದ ವಿದ್ಯಾರ್ಥಿಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಆತನು ಕೆಳಗೆ ಬಿದ್ದು ಗಾಯಗೊಂಡಿದ್ದಾನೆ.

ಕಶ್ಯಪ ವಿನಾಯಕ ಭಟ್ಟ ಅವರು ಕಾಲೇಜು ರಸ್ತೆಯ ಟಿಎಸ್ಸೆಸ್ ಆಸ್ಪತ್ರೆ ಎದುರು ನಡೆದುಕೊಂಡು ಬರುವಾಗ ಧಾರವಾಡದ ಮೃತ್ಯುಂಜಯ ಹೊಲಿ ಅವರು ಚಲಾಯಿಸುತ್ತಿದ್ದ ಕಾರು ಬಡಿದು ಕಶ್ಯಪನು ಕೆಳಗೆ ಬಿದ್ದು ಗಾಯಗೊಂಡಿದ್ದಾನೆ. ತಕ್ಷಣ ಆತನನ್ನು ಟಿಎಸ್ಸೆಸ್ ಆಸ್ಪತ್ರೆಗೆ ಸೇರಿಸಿ, ಚಿಕಿತ್ಸೆ ಕೊಡಿಸಲಾಗಿದೆ.

 

 

LEAVE A REPLY