ಅರೆಪ್ರಜ್ಞಾವಸ್ಥೆಯಲ್ಲಿ ಪತ್ತೆಯಾದ ವಿದ್ಯಾರ್ಥಿ ಮೃತ

 ನಮ್ಮ ಪ್ರತಿನಿಧಿ ವರದಿ

ಮಂಜೇಶ್ವರ : ಮುಖಾರಿಕಂಡ ಕೋಡಿಮೂಲೆಯ ಯೂಸಫ್ ಎಂಬವರ ಪುತ್ರ ಇರ್ಫಾನ್ ಕಾಂಕೋಲ್ ಪಪ್ಪಾರಟ್ಟದ ಮಸ್ಜೀದಲ್ ಸಲಾಂದರ್ಸ್ ವಾಸಸ್ಥಳದಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ.

ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಪರಿಯಾರಂ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ. ಚೀಮೇನಿ ಸರಕಾರಿ ಹೈಯರ್ ಸೆಕೆಂಡರಿ ಶಾಲೆಯ 9ನೇ ತರಗತಿ ವಿದ್ಯಾರ್ಥಿಯಾದ ಇರ್ಫಾನ್ ಹಲವು ವರ್ಷಗಳಿಂದ ದರ್ಸ್ (ಧಾರ್ಮಿಕ ಶಿಕ್ಷಣ ಕೇಂದ್ರ) ನಲ್ಲಿ ವಾಸಿಸಿ ಮತ ಪ್ರವಚನ ಕಲಿಯುತ್ತಿದ್ದನು. ಸೋಮವಾರ ಸಂಜೆ ದರ್ಸ್ ವಾಸಸ್ಥಳದಲ್ಲಿ ಇರ್ಫಾನ್ ಅರೆಪ್ರಜ್ಞಾವಸ್ಥೆಯಲ್ಲಿ ಪತ್ತೆಯಾಗಿದ್ದನು. ಕೂಡಲೇ ಆಸ್ಪತ್ರೆಗೆ ತಲುಪಿಸಿದರೂ ಅಷ್ಟರಲ್ಲಿ ನಿಧನ ಸಂಭವಿಸಿತ್ತು. ಕೊಠಡಿಯೊಳಗೆ ಇಸ್ತ್ರಿಪೆಟ್ಟಿಗೆ ಆನ್ ಮಾಡಿದ ಸ್ಥಿತಿಯಲ್ಲಿತ್ತು. ತನಗೆ ಎದೆನೋವು ಅನುಭವ ಗೊಂಡಿರುವುದಾಗಿ ಇರ್ಫಾನ್ ಈ ಹಿಂದೆ ಸ್ನೇಹಿತರಲ್ಲಿ ತಿಳಿಸಿದ್ದನು. ಇಸ್ತ್ರಿ ಮಾಡುತ್ತಿದ್ದಾಗ ಹೃದಯಾಘಾತವುಂಟಾಗಿರುವುದೇ ಸಾವಿಗೆ ಕಾರಣವಾಗಿರಬಹುದೆಂದು ಅಂದಾಜಿಸಲಾಗಿದೆ. ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕವೇ ಸಾವಿಗೆ ಕಾರಣ ದೃಢೀಕರಿಸಲು ಸಾಧ್ಯವೆಂದು ಪೆÇಲೀಸರು ತಿಳಿಸಿದ್ದಾರೆ.