ಡೆತ್ ನೋಟ್ ಬರೆದಿಟ್ಟು ವಿದ್ಯಾರ್ಥಿನಿ ನೇಣಿಗೆ

 

ನಮ್ಮ ಪ್ರತಿನಿಧಿ ವರದಿ
ಉಡುಪಿ : ನನ್ನ ಸಾವಿಗೆ ನಾನೇ ಕಾರಣ ಎಂದು ಡೆತ್ ನೋಟ್ ಬರೆದಿಟ್ಟು ಬಿದ್ಕಲಕಟ್ಟೆ ಸಮೀಪದ ಹಾರ್ದಳ್ಳಿ ಮಂಡಳ್ಳಿಯಲ್ಲಿ ಪಿಯು ವಿದ್ಯಾರ್ಥಿನಿಯೊಬ್ಬಳು ಮನೆಯೊಳಗೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಯತ್ನಿಸಿ  ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಸಾವನ್ನಪ್ಪಿದ ಘಟನೆ ಮಂಗಳವಾರ ನಡೆದಿದೆ
ಮೃತ ವಿದ್ಯಾರ್ಥಿಯನ್ನು ಕುಂದಾಪುರದ ಖಾಸಗಿ ಟ್ಯುಟೋರಿಯಲಿನಲ್ಲಿ ದ್ವಿತೀಯ ಪಿಯು ಓದುತ್ತಿದ್ದ ಕವನ (17) ಎಂದು ಗುರುತಿಸಲಾಗಿದೆ ತನ್ನ ಮನೆಯಲ್ಲಿ ಫ್ಯಾನಿಗೆ ನೇಣು ಬಿಗಿದು ಆತ್ಮಹತ್ಯೆಗೆ ಯತ್ನಿಸಿದ್ದು  ತಂದೆ ರಾಮಚಂದ್ರ ಆಚಾರ್ ಮಗಳು ಚಹಾ ಸೇವಿಸಲೂ ಹೊರಗೆ ಬಾರದೆ ಇರುವುದನ್ನು ಕಂಡು ಆತಂಕಗೊಂಡು ಬಾಗಿಲು ಬಡಿದಿದ್ದಾರೆ  ಆಗಲೂ ಬಾರದೇ ಇದ್ದಾಗ ಬಾಗಿಲು ಒಡೆದು ಒಳಹೊಕ್ಕಿ ನೋಡಿದಾಗ ಆಕೆ ಫ್ಯಾನಿಗೆ ಸೀರೆ ಸಹಾಯದಿಂದ ನೇಣು ಹಾಕಿಕೊಂಡು ಒದ್ದಾಡುತ್ತಿದ್ದಳು  ಕೂಡಲೇ ಆಕೆಯನ್ನು ಕೆಳಗಿಳಿಸಿದ ತಂದೆ ಮತ್ತು ಇತರರು ಆಕೆಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋದರೂ ಮಾರ್ಗಮಧ್ಯೆ ಸಾವನ್ನಪ್ಪಿದ್ದಾಳೆ
ಬಿದ್ಕಲಕಟ್ಟೆ ಪದವಿಪೂರ್ವ ಕಾಲೇಜಿನಲ್ಲಿ ಪ್ರಥಮ ವರ್ಷ ವ್ಯಾಸಂಗ ಮಾಡಿರುವ ಕವನ ಅನುತ್ರ್ತಿಣಳಾದ ಹಿನ್ನೆಲೆ ಕುಂದಾಪುರದ ಖಾಸಗಿ ಟ್ಯುಟೋರಿಯಲ್ ಕಾಲೇಜಿನಲ್ಲಿ ದ್ವಿತೀಯ ಪಿಯು ವ್ಯಾಸಂಗ ಮಾಡುತ್ತಿದ್ದಳು
ನನ್ನ ಸಾವಿಗೆ ನಾನೇ ಕಾರಣ  ಸಾರಿ ಪಪ್ಪ  ಸಾರಿ ಅಮ್ಮ  ಸಾರಿ ತಮ್ಮ  ಎಂದು ಚಿಕ್ಕ ಚೀಟಿಯಲ್ಲಿ ಬರೆದಿಟ್ಟು ಈಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ  ಕೋಟ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ