ವಿದ್ಯಾರ್ಥಿ ನೇಣಿಗೆ

ಸಾಂದರ್ಭಿಕ ಚಿತ್ರ

ದಾಂಡೇಲಿ : ನಗರದ ಬಾಂಬೇಚಾಳ ಟೌನ್ಶಿಪ್ ನಿವಾಸಿ, ಜನತಾ ವಿದ್ಯಾಲಯ ಇ ಎಂ ಎಸ್ ಪ್ರೌಢಶಾಲೆಯ 9ನೇ ತರಗತಿ ವಿದ್ಯಾರ್ಥಿ ಮನೆಯಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ರಾಹುಲ್ ಆತ್ಮಹತ್ಯೆ ಮಾಡಿಕೊಂಡವ. ಮನೆಯಲ್ಲಿ ಈತನ ಜೊತೆಗಿದ್ದ ಸೋದರ ಸಂಬಂಧಿ ವಿದ್ಯಾರ್ಥಿ ನಿದ್ರೆ ಮಾಡಿದ್ದನ್ನು ಗಮನಿಸಿದ ರಾಹುಲ್ ಸಂಜೆ 4.30 ಗಂಟೆಯ ವೇಳೆಗೆ ಮನೆಯ ಒಳಗಡೆಯ ಕೊಠಡಿಯಲ್ಲಿರುವ ಪ್ಯಾನಿಗೆ ತಾಯಿ ವೇಲಿನಿಂದ ಉರುಳು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ನಂತರ ಆತನ ಸಹಪಾಠಿಗಳು ಆಟದ ಸಂಬಂಧ ಕರೆಯಲು ಮನೆಗೆ ಬಂದಾಗ ವಿಷಯ ತಿಳಿದಿದ್ದು, ತಕ್ಷಣ ಆಸ್ಪತ್ರೆಗೆ ಸಾಗಿಸಿದರಾದರೂ ಪ್ರಯೋಜನವಾಗಲಿಲ್ಲ.

ಈತ ಆತ್ಮಹತ್ಯೆ ಮಾಡಿಕೊಳ್ಳಲು ನಿಖರವಾದ ಕಾರಣವೇನೆಂದು ತಿಳಿದುಬಂದಿಲ್ಲ. ಶಾಲೆಯಲ್ಲಿ ಅಭ್ಯಾಸದ ಒತ್ತಡ ಇತ್ತೆಂದು ಮಾಹಿತಿ ಲಭ್ಯವಾಗಿದೆ. ಮೃತ ವಿದ್ಯಾರ್ಥಿ ರಾಹಲ್ ದಾಂಡೇಲಿಯ ಕಾಂಗ್ರೆಸ್ ಮಹಿಳಾ ವಿಭಾಗದ ಅಧ್ಯಕ್ಷೆ ರೇಣುಕಾ ಬಂದಂ ಅವರ ಮಗನಾಗಿದ್ದಾನೆ. ಪ್ರಕರಣ ನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.

 

LEAVE A REPLY