ವಿದ್ಯಾರ್ಥಿ ಆಕಸ್ಮಿಕ ಸಾವು

ನಮ್ಮ ಪ್ರತಿನಿಧಿ ವರದಿ

ಬಂಟ್ವಾಳ : ಇಲ್ಲಿನ ಸರಕಾರಿ ಪ್ರಥಮ ದರ್ಜೆ ಕಾಲೇಜು ವಿದ್ಯಾರ್ಥಿ ಸುನಿಲ್ ಅಕಾಲಿಕ ಸಾವನ್ನಪ್ಪಿದ್ದಾರೆ. ಅಂತಿಮ ಬಿ ಎ ವಿದ್ಯಾರ್ಥಿಯಾಗಿದ್ದ ಇವರು ಹಠಾತ್ ಅನಾರೋಗ್ಯಕ್ಕೆ ತುತ್ತಾಗಿ ಚಿಕಿತ್ಸೆ ಫಲಕಾರಿಯಾಗದೆ ಮಂಗಳೂರಿನ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಪ್ರತಿಭಾವಂತ ವಿದ್ಯಾರ್ಥಿಯಾಗಿದ್ದ ಈತ ಕಲಿಕೆಯಲ್ಲಿ ತರÀಗತಿಯಲ್ಲಿ ಮೊದಲಿಗನಾಗಿದ್ದ ಎಂದು ತಿಳಿಸುವ ಕಾಲೇಜು ಪ್ರಾಂಶುಪಾಲರು ಮೃತ ಸುನಿಲ್ ತಂದೆ, ತಾಯಿ ಹಾಗೂ ಸಹೋದರಿಯನ್ನು ಅಗಲಿದ್ದಾರೆ ಎಂದಿದ್ದಾರೆ.