ಬೈಕ್ ಪರಸ್ಪರ ಡಿಕ್ಕಿ : ವಿದ್ಯಾರ್ಥಿ ಸಾವು

ನಮ್ಮ ಪ್ರತಿನಿಧಿ ವರದಿ

ಕಾಸರಗೋಡು : ನೀರ್ಚಾಲು ಸಮೀಪದ ಮುಂಡಿತ್ತಡ್ಕ ಗುಣಾಜೆ ಎಂಬಲ್ಲಿ ಬುಧವಾರ ರಾತ್ರಿ ಬೈಕುಗಳು ಪರಸ್ಪರ ಡಿಕ್ಕಿ ಹೊಡೆದು ನಡೆದ ಅಪಘಾತದಲ್ಲಿ ವಿದ್ಯಾರ್ಥಿಯೊಬ್ಬ ದಾರುಣವಾಗಿ ಮೃತಪಟ್ಟನು.

ಕಂದಲ್ ನಿವಾಸಿ ಅಬ್ಬಾಸ್-ರುಖಿಯಾ ದಂಪತಿ ಪುತ್ರ ಮಿದ್ಲಾಜ್ (18) ಮೃತ ವಿದ್ಯಾರ್ಥಿ. ಮಿದ್ಲಾಜ್ ಸಂಚರಿಸುತ್ತಿದ್ದ ಬೈಕಿಗೆ ಎದುರಿನಿಂದ ಆಗಮಿಸಿದ ಬೈಕ್ ಡಿಕ್ಕಿ ಹೊಡೆದು ಅಪಘಾತ ನಡೆದಿದ್ದು, ಶವವನ್ನು ಕಾಸರಗೊಡು ಜನರಲ್ ಆಸ್ಪತ್ರೆಗೆ ಸಾಗಿಸಲಾಯಿತು. ಮರಣೋತ್ತರ ಪರೀಕ್ಷೆಯ ಬಳಿಕ ಶವವನ್ನು ಕುಟುಂಬಸ್ಥರಿಗೆ ಬಿಟ್ಟುಕೊಡಲಾಯಿತು.

LEAVE A REPLY