ಕುಸಿದು ಬಿದ್ದ ವಿದ್ಯಾರ್ಥಿನಿ ಮೃತ್ಯು ; ಶಿಕ್ಷಕರು ಹಲ್ಲೆಗೈದು ಸಾವು : ಆರೋಪ

ನಮ್ಮ ಪ್ರತಿನಿಧಿ ವರದಿ

ಮಂಜೇಶ್ವರ : ಶಾಲೆಯಲ್ಲಿ ಕುಸಿದು ಬಿದ್ದು ಚಿಕಿತ್ಸೆಯಲ್ಲಿದ್ದ ಅರನೇ ತರಗತಿ ವಿದ್ಯಾರ್ಥಿನಿಯೊಬ್ಬಳು ಮಂಗಳವಾರ ಬೆಳಿಗ್ಗೆ ಸಾವನ್ನಪ್ಪಿದ್ದಾಳೆ. ಈ ಮಧ್ಯೆ ವಿದ್ಯಾರ್ಥಿನಿಗೆ ಶಿಕ್ಷಕರು ಹಲ್ಲೆಗೈದು ವಿದ್ಯಾರ್ಥಿನಿ ಸಾವನ್ನಪ್ಪಿರುವುದಾಗಿ ಊರವರು ಅರೋಪಿಸಿರುವುದು ವಿವಾದಕ್ಕೆ ಕಾರಣವಾಗಿದೆ.

ಮಣಿಮುಂಡ ನಿವಾಸಿ ಅಬ್ದುಲ್ ಖಾದರ್-ಮೆಹರುನ್ನಿಸಾ ದಂಪತಿ ಪುತ್ರಿ ಹಾಗೂ ಉಪ್ಪಳ ಪರಿಸರದಲ್ಲಿರುವ ಮಣಿಮುಂಡ ಖಾಸಗಿ ಶಾಲೆಯೊಂದರ ವಿದ್ಯಾರ್ಥಿನಿಯೂ ಆದ ಆಯಿಷ ಮೆಹ್ನಾಸ್ (11) ಮೃತ ವಿದ್ಯಾರ್ಥಿನಿ.

ವಿವಾದ ಸೃಷ್ಟಿಯಾದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಹಾಗೂ ಪೆÇಲೀಸ್ ಅಧಿಕಾರಿಗಳು ಮಧ್ಯೆ ಪ್ರವೇಶಿಸಿ ಮಂಗಲ್ಪಾಡಿ ಆಸ್ಪತ್ರೆಯಲ್ಲಿ ಮರಣೋತ್ತರಕ್ಕಾಗಿ ತಲುಪಿಸಿದ್ದ ವಿದ್ಯಾರ್ಥಿನಿಯ ಶವವನ್ನು ಹೆಚ್ಚಿನ ಮರಣೋತ್ತರ ಪರೀಕ್ಷೆಗಾಗಿ ಪೆರಿಯಾರಂ ಕೊಂಡೊಯ್ದಿದ್ದಾರೆ.

ಪೆÇಲೀಸರು ವಿದ್ಯಾರ್ಥಿನಿ ಅಸಹಜ ಸಾವು ಎಂಬಂತೆ ಕೇಸು ದಾಖಲಿಸಿಕೊಂಡಿದ್ದಾರೆ. ಊರವರ ಹೇಳಿಕೆಯಂತೆ ಶಾಲೆಯಲ್ಲಿ ನಡೆದ ಪರೀಕ್ಷೆಯಲ್ಲಿ ಉತ್ತರ ಪತ್ರಿಕೆಯಲ್ಲಿ ಪ್ರಶ್ನೆಗಳನ್ನು ಬರೆದ ಕಾರಣ ಮುಂದಿಟ್ಟು ಇಬ್ಬರು ಶಿಕ್ಷಕರು ಇತರ ವಿದ್ಯಾರ್ಥಿಗಳ ಮುಂದೆ ಗಂಭೀರ ಹಲ್ಲೆಗೈದಿರುವುದಾಗಿಯೂ, ಹಲ್ಲೆಯ ಬಳಿಕ ಮೂರ್ಛೆ ತಪ್ಪಿದರೂ ಬಾಲಕಿಗೆ ಶಿಕ್ಷಕರು ಮತ್ತೆ ಹಲ್ಲೆಗೈದಿರುವುದಾಗಿಯೂ ವಿದ್ಯಾರ್ಥಿನಿಯ ಸಹಪಾಠಿಗಳು ಹೇಳುತ್ತಿದ್ದಾರೆಂದು ಆರೋಪಿಸಲಾಗಿದೆ. ಈ ಮಧ್ಯೆ ಪ್ರಕರಣವನ್ನು ಮುಚ್ಚಿ ಹಾಕಲು ಶಾಲಾ ಅಧಿಕೃತರು ವಿದ್ಯಾರ್ಥಿನಿಯ ಪೆÇೀಷಕರಿಗೆ ಒತ್ತಡ ಹೇರಿರುವುದಾಗಿಯೂ ಅರೋಪ ಕೇಳಿ ಬಂದಿದೆ. ಅಂತೂ ಬುಧವಾರ ಮರಣೋತ್ತರ ಪರೀಕ್ಷೆಯ ವರದಿ ಲಭಿಸಿದ ಬಳಿಕ ವಿವಾದ ಸುಖಾಂತ್ಯಗೊಳ್ಳಬಹುದು.