ಫಿಲ್ಮ್ ಚೇಂಬರುಗಳ ಜಗಳ ಬೀದಿಗೆ

ಅತ್ಯುತ್ತಮ ಕನ್ನಡ ಚಿತ್ರ ಪ್ರಶಸ್ತಿ ಪಡೆದ `ರಿಸರ್ವೇಶನ್’ ಹಾಗೂ `ರೈಲ್ವೇ ಚಿಲ್ಡ್ರನ್’ ತನ್ನ ಮೂಲಕ  ನೋಂದಣಿಗೊಂಡಿವೆಯೆಂದು  ಮೂಲತಃ ಕರ್ನಾಟಕ ಡಬ್ಡ್ ಫಿಲ್ಮ್ ಚೇಂಬರ್ ಆಫ್  ಕಾಮರ್ಸ್ ಎಂದು ಕರೆಯಲ್ಪಡುತ್ತಿದ್ದ ಹಾಗೂ ಈಗ ಕನ್ನಡ ಫಿಲ್ಮ್ ಚೇಂಬರ್ ಆಫ್ ಕಾಮರ್ಸ್ ಎಂದು ಕರೆಸಿಕೊಳ್ಳುತ್ತಿರುವ ಸಂಸ್ಥೆ ಹೇಳಿಕೊಂಡಿದೆ. ಅಂದ ಹಾಗೆ,  ಈ ಕನ್ನಡ ಫಿಲ್ಮ್ ಚೇಂಬರ್ ಆಫ್ ಕಾಮರ್ಸ್ ಎಂಬ ಸಂಸ್ಥೆ ಕರ್ನಾಟಕ ಫಿಲ್ಮ್  ಚೇಂಬರ್ ಆಫ್ ಕಾಮರ್ಸ್  ಇದರಿಂದ ಹೊರನಡೆದ ಕೆಲ ಮಂದಿ ಸ್ಥಾಪಿಸಿದ ಸಂಸ್ಥೆಯಾಗಿದೆ.

ಆದರೆ ಈ ಕನ್ನಡ ಚೇಂಬರ್ ಸಂತಸ ಹೆಚ್ಚು ಕಾಲ ಬಾಳಲಿಲ್ಲ. ಕರ್ನಾಟಕ ಫಿಲ್ಮ್ ಚೇಂಬರ್ ಅದರ ಬದಲಾದ ಹೆಸರು ರದ್ದುಪಡಿಸುವಲ್ಲಿ ಸಫಲವಾಗಿದೆ. ಕರ್ನಾಟಕ ಫಿಲ್ಮ್ ಚೇಂಬರ್ ದೂರಿನಂತೆ ಸೊಸೈಟೀಸ್ ರಿಜಿಸ್ಟ್ರಾರ್ ಅವರು ಹೊಸ ಚೇಂಬರಿಗೆ ತನ್ನ ಹಿಂದಿನ ಹೆಸರು – ಕರ್ನಾಟಕ ಡಬ್ಬಿಂಗ್ ಫಿಲ್ಮ್ ಚೇಂಬರ್ ಆಫ್ ಕಾಮರ್ಸ್ ಇಟ್ಟುಕೊಳ್ಳುವಂತೆ ಹೇಳಿದೆ. ಕಾರಣ ಕನ್ನಡ ಚೇಂಬರ್ ಹಾಗೂ ಕರ್ನಾಟಕ ಚೇಂಬರ್ ಪಕ್ಕನೆ ಒಂದೇ ಸಂಘಟನೆಯೆಂಬಂತೆ ಭಾಸವಾಗುತ್ತಿದೆ.

ಮೂಲ ಸಂಸ್ಥೆ ಕರ್ನಾಟಕ ಫಿಲ್ಮ್ ಚೇಂಬರ್ ಆಫ್ ಕಾಮರ್ಸ್ ಸದಸ್ಯನಾಗಿ ನೋಂದಣಿಗೊಳ್ಳಲು ಚಿತ್ರ ನಿರ್ಮಾಪಕರೊಬ್ಬರು ರೂ 1.3 ಲಕ್ಷ ವ್ಯಯಿಸಬೇಕಿದ್ದರೆ, ಹೊಸ ಸಂಘಟನೆ ಈ ಪ್ರಕ್ರಿಯೆಯನ್ನು ಕೇವಲ ರೂ 10,000ಕ್ಕೆ ನಡೆಸಿಕೊಡುವುದಾಗಿ ಹೇಳುತ್ತಿದೆಯಲ್ಲದೆ ಕರ್ನಾಟಕ ಫಿಲ್ಮ್ ಚೇಂಬರ್ ಚಿತ್ರ ನಿರ್ಮಾಪಕರ ಸುಲಿಗೆ ಮಾಡುತ್ತಿದೆ ಎಂದೂ ಆರೋಪಿಸಿದೆ.

ಕರ್ನಾಟಕ ಫಿಲ್ಮ್ ಚೇಂಬರಿನಲ್ಲಿ ಚಿತ್ರವೊಂದರ ನೋಂದಣಿಗಾಗಿ ರೂ 2,000 ವೆಚ್ಚ  ತಗಲುವುದಾದರೆ, ಹೊಸ ಚೇಂಬರ್ ಅದಕ್ಕೆ ರೂ 500 ಮಾತ್ರ ಶುಲ್ಕ ವಿಧಿಸುತ್ತಿದೆ. ಕನ್ನಡ ಚೇಂಬರ್ ಮೂಲಕ ಕಳೆದ ವರ್ಷ 22 ಚಿತ್ರಗಳು ಬಂದಿದ್ದರೆ ಈ ವರ್ಷ ಅದು 100 ಚಿತ್ರಗಳ ಗುರಿಯಿರಿಸಿದೆ. ಇದರ ಹೊರತಾಗಿ ಎರಡೂ ಚೇಂಬರುಗಳಲ್ಲಿ ಡಬ್ಬಿಂಗ್ ವಿಚಾರದಲ್ಲಿ ಗುದ್ದಾಟ ಮುಂದುವರಿದಿದೆ. ಕನ್ನಡ ಚೇಂಬರ್ ಕಳೆದ ವರ್ಷ ಎರಡು ಡಬ್ಬಿಂಗ್ ಚಿತ್ರಗಳನ್ನು ಹೊರ ತರುವಲ್ಲಿ ಶ್ರಮಿಸಿದೆ. ಆದರೆ ಇದು ಡಬ್ಬಿಂಗ್ ವಿರೋಧಿ ಕರ್ನಾಟಕ ಫಿಲ್ಮ್ ಚೇಂಬರ್ ಆಫ್ ಕಾಮರ್ಸಿಗೆ ಸಹಿಸಲು ಸಾಧ್ಯವಾಗಿಲ್ಲ. “ಕಳೆದ ವರ್ಷ ಎರಡು ಡಬ್ಬಿಂಗ್ ಚಿತ್ರ ತೆರೆ ಕಾಣಲು ಶ್ರಮಿಸಿದ ಕೃಷ್ಣಮೂರ್ತಿ ಈ ಬಾರಿ 20 ಡಬ್ಬಿಂಗ್ ಚಿತ್ರಗಳನ್ನು ಹೊರತರುತ್ತಿದ್ದಾರೆ. ಇದನ್ನು ತಪ್ಪಿಸಲು ಸಾಧ್ಯವಿಲ್ಲ” ಎನ್ನುತ್ತಾರೆ ಕನ್ನಡ ಫಿಲ್ಮ್ ಚೇಂಬರಿನ ಕೃಷ್ಣೇ ಗೌಡ.

ತರುವಾಯ ಮೂಲ ಕನ್ನಡ ಫಿಲ್ಮ್ ಚೇಂಬರಿನಿಂದ ಡಬ್ಬಿಂಗ್ ಚೇಂಬರಿಗೆ ಹಲವರು ವಲಸೆ ಹೋಗುತ್ತಿರುವ ಪ್ರಕ್ರಿಯೆ ಮುಂದುವರಿಯುತ್ತಲೇ ಇದೆ.