ಬೀದಿ ಬದಿ ವ್ಯಾಪಾರಸ್ಥರ, ಗೂಡಂಗಡಿಗಳ ತೆರವು

ಸಾಂದರ್ಭಿಕ ಚಿತ್ರ

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ದೇರಳಕಟ್ಟೆ ಜಂಕ್ಷನ್ ರಸ್ತೆ ಪಕ್ಕದಲ್ಲಿದ್ದ ಬೀದಿ ಬದಿ ವ್ಯಾಪಾರಸ್ಥರ ಮತ್ತು ಗೂಡಂಗಡಿಗಳ ತೆರವು ಕಾರ್ಯಾಚರಣೆಯನ್ನು ಬೆಳ್ಮ ಗ್ರಾಮ ಪಂಚಾಯತಿ ವತಿಯಿಂದ ನಡೆಸಲಾಗಿದೆ.

ಹಲವು ವರ್ಷಗಳಿಂದ ಇಲ್ಲಿ ಕಾರ್ಯಾಚರಿಸುತ್ತಿದ್ದ ಗೂಡಂಗಡಿಗಳ ಮತ್ತು ಬೀದಿಬದಿ ವ್ಯಾಪಾರಿಗಳನ್ನು ಪಂಚಾಯತಿ ಆಡಳಿತ ಮುನ್ಸೂಚನೆ ನೀಡಿ ತೆರವುಗೊಳಿಸಿದೆ. ಅಂಗಡಿಗಳ ಕಾರ್ಯಾಚರಣೆಯಿಂದಾಗಿ ವಾಹನ ಸಂಚಾರಕ್ಕೆ ಅಡ್ಡಿ ಉಂಟಾಗುತ್ತಿತ್ತು. ಇದರಿಂದ ಸಾರ್ವಜನಿಕರಿಂದ ವ್ಯಾಪಕ ದೂರುಗಳು ಬಂದ ಹಿನ್ನೆಲೆಯಲ್ಲಿ ತೆರವುಗೊಳಿಸಲಾಗಿದೆ.

ಒಟ್ಟು 15 ಬೀದಿ ಬದಿಯ ವ್ಯಾಪಾರಸ್ಥರ ಅಂಗಡಿಗಳನ್ನು ತೆರವು ಮಾಡಲಾಗಿದೆ ಎಂದು ಬೆಳ್ಮ ಗ್ರಾ ಪಂ ಉಪಾಧ್ಯಕ್ಷ ಅಬ್ದುಲ್ ಸತ್ತಾರ್ ಹೇಳಿದ್ದಾರೆ.