ಬೀದಿ ದೀಪ ಲೋಕಾರ್ಪಣೆ

ಬೀದಿ ದೀಪಕ್ಕೆ ಚಾಲನೆ ನೀಡುತ್ತಿರುವುದು

ನಮ್ಮ ಪ್ರತಿನಿಧಿ ವರದಿ

ಕಾಸರಗೋಡು : ಸೂರಂಬೈಲು ಪರಿಸರದಲ್ಲಿ ಜೈ ಹಿಂದ್ ಆರ್ಟ್ಸ್ ಮತ್ತು ಸ್ಪೋಟ್ರ್ಸ್ ಕ್ಲಬ್ ಮತ್ತು ಸ್ಥಳೀಯರ ಸಹಕಾರದಲ್ಲಿ ನೂತನವಾಗಿ ನಿರ್ಮಿಸಿದ ಬೃಹತ್ ವಿದ್ಯುತ್ ಬೀದಿ ದೀಪವನ್ನು ಲೋಕಾರ್ಪಣೆಗೊಳಿಸಲಾಯಿತು.

ಬೀದಿ ದೀಪವನ್ನು ಮಾಜಿ ಸೈನಿಕ ಶಂಕರನಾರಾಯಣ ಹೊಳ್ಳ ಸ್ವಿಚ್ ಆನ್ ಮಾಡುವ ಮೂಲಕ ಚಾಲನೆ ನೀಡಿದರು. ಈ ಸಂದರ್ಭ ಜನಪ್ರತಿನಿಧಿಗಳ ಸಹಿತ ಹಲವಾರು ಮಂದಿ ಉಪಸ್ಥಿತರಿದ್ದರು.