ಉಡುಪಿಯಲ್ಲಿ ಬೀದಿ ನಾಯಿಗಳ ಹೆಚ್ಚಳ

ಉಡುಪಿ : ನಗರದ ಸುತ್ತಮುತ್ತ ಬೀಡಿನಗುಡ್ಡೆ, ಅಲಾಂಕಾರ್ ಚಿತ್ರ ಮಂದಿರದ ಹತ್ತಿರ, ಚಿತ್ತರಂಜನ್ ವೃತ್ತ, ಮಿಷನ್ ಕಂಪೌಂಡ್, ಭುಜಂಗ ಪಾರ್ಕ್, ಆದಿ ಉಡುಪಿ ಪ್ರದೇಶಗಳಲ್ಲಿ ಬೀದಿ ನಾಯಿಗಳ ಹಾವಳಿ ಮಿತಿಮೀರಿದೆ. ಇವುಗಳ ಉಪಟಳದಿಂದ ಸಾರ್ವಜನಿಕರು ತೊಂದರೆ ಅನುಭವಿಸುತ್ತಿದ್ದಾರೆ.
ಬೀದಿ ನಾಯಿಗಳು ಮನ ಬಂದಂತೆ ರಸ್ತೆಯಲ್ಲಿ ಸಂಚರಿಸುವುದರಿಂದ ವಾಹನ ಅಪಘಾತಗಳಿಗೆ ಕಾರಣ ಆಗುತ್ತಿವೆ. ಭುಜಂಗ ಪಾರ್ಕಿನ ಮಕ್ಕಳ ಆಟದ ಮೈದಾನವನ್ನು ಬೀದಿ ನಾಯಿಗಳು ಆಶ್ರಯ ತಾಣವಾಗಿಸಿಕೊಂಡಿವೆ. ಇಲ್ಲಿ ಮಕ್ಕಳು ಆಟವಾಡಲು ಭಯ ಪಡುವಂತಾಗಿದೆ ಎಂದು ಪೋಷಕರು ತಿಳಿಸಿದ್ದಾರೆ.
ಸಾರ್ವಜನಿಕರಿಗಾಗುವ ಸಮಸ್ಯೆಯನ್ನು ಗಮನಿಸಿ ಸಂಬಂಧಪಟ್ಟವರು ಬೀದಿ ನಾಯಿಗಳ ಸಂತತಿ ನಿಯಂತ್ರಿಸಬೇಕಾಗಿದೆ ಎಂದು ಸಾಮಾಜಿಕ ಕಾರ್ಯಕರ್ತ ತಾರಾನಾಥ್ ಮೇಸ್ತ ಶಿರೂರು ಆಗ್ರಹಿಸಿದ್ದಾರೆ.