ಉಡುಪಿ ಭುಜಂಗ ಪಾರ್ಕ್ ಬಳಿ ಬೀದಿನಾಯಿ ಉಪಟಳ

ಉಡುಪಿ ಪೇಟೆ ಸುತ್ತಮುತ್ತ ಪ್ರದೇಶಗಳಲ್ಲಿ ಬೀದಿ ನಾಯಿಗಳ ಉಪಟಳ ಮಿತಿ ಮೀರಿದೆ. ಇವುಗಳ ಉಪದ್ರದಿಂದ ಸಾರ್ವಜನಿಕರು ತೊಂದರೆ ಅನುಭವಿಸುತ್ತಿದ್ದಾರೆ. ಬೀದಿ ನಾಯಿಗಳು ಮನ ಬಂದಂತೆ ರಸ್ತೆಯಲ್ಲಿ ಸಂಚರಿಸುವುದರಿಂದ ವಾಹನ ಅಪಘಾತಗಳಾಗುತ್ತಿವೆ. ಭುಜಂಗ ಪಾರ್ಕಿನ ಮಕ್ಕಳ ಆಟದ ಮೈದಾನವನ್ನು ಕೂಡಾ ಬೀದಿ ನಾಯಿಗಳು ಆಶ್ರಯ ತಾಣವಾಗಿಸಿ ಕೊಂಡಿವೆ. ಇಲ್ಲಿ ಮಕ್ಕಳು ಆಟವಾಡಲು ಭಯಪಡುವಂತಾಗಿದೆ. ಆದ್ದರಿಂದ ಸಂಬಂಧಪಟ್ಟವರು ಸಾರ್ವಜನಿಕರಿಗಾಗುವ ಸಮಸ್ಯೆಯನ್ನು ಗಮನಿಸಿ, ನಗರದ ಸುತ್ತಮುತ್ತಲಿನ ಬೀದಿ ನಾಯಿಗಳಿಗೆ ಸಂತಾನಹರಣ ಚಿಕಿತ್ಸೆ ಮಾಡಿ ಅವುಗಳ ಸಂತತಿಯನ್ನು ನಿಯಂತ್ರಿಸಬೇಕಾಗಿದೆ

  • ತಾರಾನಾಥ್ ಮೇಸ್ತ, ಶಿರೂರು