ಜೆಸಿಬಿ ಬಳಸಿ ತಂಗುದಾಣ ಕೆಡವಿದ ಅಪರಿಚಿತ ತಂಡ

ಕೆಡವಿದ ತಂಗುದಾಣ ಸ್ಥಳದಲ್ಲಿ ಪ್ರಯಾಣಿಕರು ಕಾಯುತ್ತಿರುವುದು

ನಮ್ಮ ಪ್ರತಿನಿಧಿ ವರದಿ

ಕಾಸರಗೋಡು : ಬಂಬ್ರಾಣದಲ್ಲಿರುವ ಬಸ್ ತಂಗುದಾಣವನ್ನು ಅಪರಿಚಿತರ ತಂಡ ಜೆಸಿಬಿ ಉಪಯೋಗಿಸಿ ನಾಶಪಡಿಸಿದ ಘಟನೆ ವಿವಾದಕ್ಕೀಡಾಗಿದೆ.

ಘಟನೆಯಲ್ಲಿ ಗ್ರಾಮ ಪಂಚಾಯತಿ ಅಧಿಕಾರಿಗಳು, ಪೆÇಲೀಸರು ಅಪರಿಚಿತರ ತಂಡವನ್ನು ಸಂರಕ್ಷಿಸುತ್ತಿರುವುದಾಗಿ ಸ್ಥಳೀಯರು ಆರೋಪಿಸಿದ್ದಾರೆ. ಈ ಬಗ್ಗೆ ಜಿಲ್ಲಾಧಿಕಾರಿಗೂ, ಪೆÇಲೀಸ್ ವರಿಷ್ಠಾಧಿಕಾರಿಗೂ ದೂರು ನೀಡಲಾಗಿದೆ.

ಹಲವಾರು ವರ್ಷಗಳ ಹಿಂದೆ ಬಿಸಿಲು, ಮಳೆಯಿಂದ ಪ್ರಯಾಣಿಕರಿಗೆ ರಕ್ಷಣೆ ಒದಗಿಸಲು ಸ್ಥಳೀಯರು ಈ ಬಸ್ ತಂಗುದಾಣವನ್ನು ನಿರ್ಮಿಸಿದ್ದರು. ಇತ್ತೀಚೆಗೆ ತಂಗುದಾಣವನ್ನು ಕೇಂದ್ರೀಕರಿಸಿ ವಿದ್ಯಾರ್ಥಿಗಳಿಗೆ ಉಪಟಳ ನೀಡುತ್ತಿದ್ದುದಾಗಿ ದೂರು ಬಂದಿತ್ತು. ಈ ಮಧ್ಯೆ ಬಸ್ ತಂಗುದಾಣವನ್ನು ತೆಗೆಯಬೇಕೆಂದು ಮುಸ್ಲಿಂ ಲೀಗ್ ಕಾರ್ಯಕರ್ತರು ಗ್ರಾಮ ಪಂಚಾಯತಿ ಅಧಿಕಾರಿಗಳಲ್ಲಿ ಆಗ್ರಹಿಸಿದ್ದರು. ಈ ವಿಷಯ ಗ್ರಾಮ ಪಂಚಾಯತಿ ಸ್ಥಾಯಿ ಸಮಿತಿ ಚರ್ಚೆ ನಡೆಸಿ ತೀರ್ಮಾನ ಕೈಗೊಳ್ಳಲು ಗ್ರಾಮ ಪಂಚಾಯತಿ ಆಡಳಿತ ಸಮಿತಿಗೆ ವಹಿಸಿಕೊಟ್ಟಿತ್ತೆಂದು ಪಂಚಾಯತಿ ಕಾರ್ಯದರ್ಶಿ ತಿಳಿಸಿದ್ದಾರೆ. ಆದರೆ ಗ್ರಾಮ ಪಂಚಾಯತಿ ಆಡಳಿತ ಸಮಿತಿ ಈ ವಿಷಯದಲ್ಲಿ ಯಾವುದೇ ತೀರ್ಮಾನ ಕೈಗೊಂಡಿರಲಿಲ್ಲ. ಈ ಮಧ್ಯೆ ಕಳೆದ ಶುಕ್ರವಾರ ಮುಂಜಾನೆ ತಂಗುದಾಣವನ್ನು ನಾಶಪಡಿಸಲಾಗಿದೆ. ಈ ಬಗ್ಗೆ ಸ್ಥಳೀಯರು ಪೆÇಲೀಸರಿಗೆ ದೂರು ನೀಡಿದ್ದರೂ ಗ್ರಾಮ ಪಂಚಾಯತಿ ಕಾರ್ಯದರ್ಶಿ ದೂರು ನೀಡಿದ ಪ್ರಕರಣ ದಾಖಲಿಸಲು ಸಾಧ್ಯವಿಲ್ಲವೆಂದು ಪೆÇಲೀಸರು ತಿಳಿಸಿದ್ದಾರೆ. ಜೊತೆಗೆ ಗ್ರಾಮ ಪಂಚಾಯತಿ ಅಧಿಕಾರಿಗಳು ಯಾವುದೇ ದೂರು ಈ ಬಗ್ಗೆ ನೀಡಿಲ್ಲವೆಂದು ಸ್ಥಳೀಯರು ತಿಳಿಸಿದ್ದಾರೆ.