ಉಪದೇಶ ಸಾಕು, ಹಿಂಸಾಚಾರ ನಿಲ್ಲಿಸಿ : ಆರೆಸ್ಸೆಸ್ಸಿಗೆ ಪಿಣರಾಯಿ

ಪಿಣರಾಯಿ

ಕಾಸರಗೋಡು : ರಾಜಕೀಯ ಹಿಂಸೆಯ ವಿರುದ್ಧ ರಾಷ್ಟ್ರ ಮಟ್ಟದಲ್ಲಿ ಪ್ರತಿಭಟಿಸುವ ಮೊದಲು ಕೇರಳದಲ್ಲಿ ರಾಜಕೀಯ ಹಿಂಸೆಯಲ್ಲಿ ತೊಡಗುವುದನ್ನು ನಿಲ್ಲಿಸಬೇಕೆಂಬ ಸಲಹೆಯನ್ನು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಆರೆಸ್ಸೆಸ್ಸಿಗೆ ನೀಡಿದ್ದಾರೆ. ಆರೆಸ್ಸೆಸ್ ಮೊದಲು ತನ್ನ ಶಾಂತಿ ಮಂತ್ರದ ಮಾತುಗಳನ್ನು ಕೃತಿಗಿಳಿಸಿ ನಂತರ ಹೋರಾಡಲಿ ಎಂದೂ ಅವರು ಹೇಳಿದ್ದಾರೆ.

“ರಾಜ್ಯ ಸರಕಾರ ಯಾವುದೇ ರೀತಿಯ ಹಿಂಸೆಯನ್ನು ಉತ್ತೇಜಿಸುವುದಿಲ್ಲ. ರಾಜ್ಯದಲ್ಲಿ ಶಾಂತಿ ನೆಲೆಸಲು ನಾವು ಅಗತ್ಯ ಕ್ರಮ ಕೈಗೊಳ್ಳುತ್ತಿದ್ದೇವೆ” ಎಂದು ವಿಜಯನ್ ತಿಳಿಸಿದ್ದಾರೆ. “ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತ ಹೇರಲಾಗುವುದು ಎಂಬ ಬೆದರಿಕೆಗಳು ನಮ್ಮ ಮೇಲೆ ಪರಿಣಾಮ ಬೀರದು” ಎಂದೂ ಅವರು ಹೇಳಿದರು. ವಿರೋಧಿಗಳನ್ನು ಮಟ್ಟ ಹಾಕಲು ಹಿಂಸೆಗೆ ತೊಡಗಿದರೆ ಗಂಭೀರ ಪರಿಣಾಮ ಎದುರಿಸಬೇಕಾಗಬಹುದೆಂದು ಕೇಂದ್ರ ಸಚಿವ ವೆಂಕಯ್ಯ ನಾಯ್ಡು ಕೇರಳ ಸರಕಾರಕ್ಕೆ ಎಚ್ಚರಿಕೆ ನೀಡಿದ ಹಿನ್ನೆಲೆಯಲ್ಲಿ ಮೇಲಿನ ಹೇಳಿಕೆ ಬಂದಿದೆ.