ರಾಜಕೀಯ ಕೆಸರೆರಚಾಟ ನಿಲ್ಲಿಸಿ

ಕಾಂಗ್ರೆಸ್ ಪಕ್ಷದ ರಾಷ್ಟ್ರೀಯಉಪಾಧ್ಯಕ್ಷ ರಾಹುಲ್ ಗಾಂಧಿ ಪ್ರಧಾನಮಂತ್ರಿ ನರೇಂದ್ರ ಮೋದಿಯನ್ನು ವಿದೇಶಿ ನೆಲದಲ್ಲಿ ಟೀಕಿಸಿರುವ ಬಗ್ಗೆ ಸಾಕಷ್ಟು ವಿರೋಧ ವ್ಯಕ್ತವಾಯಿತು. ಅಮೆರಿಕಾಗೆ ಎರಡು ವಾರ ಪ್ರವಾಸಕ್ಕೆ ತೆರಳಿರುವ ರಾಹುಲ್ ಆಲಿನ ಕ್ಯಾಲಿಫೋರ್ನಿಯಾ ವಿಶ್ವ ವಿದ್ಯಾನಿಲಯದಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡುತ್ತಾ ನೋಟು ರದ್ಧತಿ ಸೇರಿದಂತೆ ಮೋದಿ ಸರಕಾರದ ಹಲವಾರು ಕ್ರಮಗಳನ್ನು ಟೀಕಿಸಿದ್ದಾರೆಂದು ಮಾಧ್ಯಮಗಳಲ್ಲಿ ವರದಿಯಾಗಿದೆ ಇದಕ್ಕೆ ಮಾರುತ್ತರ ನೀಡಿರುವ ವಾರ್ತಾ ಮತ್ತು ಪ್ರಸಾರ ಸಚಿವೆ ಸ್ಮತಿ ಇರಾನಿ ಪ್ರಧಾನಿ ಮೋದಿಯನ್ನು ಟೀಕಿಸುವ ತಂತ್ರ ಸ್ವದೇಶದಲ್ಲಿ ನಡೆಯದ ಕಾರಣ ರಾಹುಲ್ ಇದಕ್ಕಾಗಿ ವಿದೇಶಿ ನೆಲದ ವೇದಿಕೆ ಬಳಸಿಕೊಂಡಿದ್ದಾರೆಂದು ಆರೋಪಿಸಿದ್ದಾರೆ ಇದಕ್ಕೆ ತಿರುಗೇಟು ನೀಡಿರುವ ಕಾಂಗ್ರೆಸ್ ಮುಖಂಡ ಆನಂದ ಶರ್ಮ ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ರಾಷ್ಟ್ರವನ್ನು ಅಪಮಾನ ಮಾಡುವುದರಲ್ಲಿ ಮೋದಿ ಮೊದಲಿಗರೆಂದು ಆರೋಪಿಸಿದ್ದಾರೆ ಈ ಆರೋಪ ಪ್ರತ್ಯಾರೋಪಗಳು ಏನೇ ಇರಲಿ ವಿದೇಶಿ ನೆಲದಲ್ಲಿ ಪರಸ್ಪರ ನಾವೇ ಕಚ್ಚಾಡಿಕೊಂಡರೇ ಹಾಳಾಗುವುದು ನಮ್ಮ ದೇಶದ ಮರ್ಯಾದೆಯೇ ನಮ್ಮಲ್ಲಿ ಪರಿಸ್ಪರ ಏನೇ ಭಿನ್ನಾಭಿಪ್ರಾಯಗಳಿದ್ದರೂ ವಿದೇಶಿ ನೆಲದಲ್ಲಾದರೂ ನಮ್ಮ ಒಗ್ಗಟ್ಟು ಪ್ರದರ್ಶಿಸುವುದು ಅತ್ಯಗತ್ಯ ಸಂಬಂಧಪಟ್ಟವರು ಇದನ್ನು ಅರಿತುಕೊಳ್ಳುವುದು ಒಳಿತು

  • ಕೆ ಉದಯ ಜೋಡುಕಟ್ಟೆ   ಕಾರ್ಕಳ