ಕದ್ದು ಕೇಳುವ ಕೆಟ್ಟ ನಡವಳಿಕೆ ಕೊನೆಯಾಗಲಿ

ಟೆಲಿಫೋನ್ ಕದ್ದಾಲಿಕೆ ಕುರಿತಂತೆ ದೇಶದ ರಾಜಕಾರಣದಲ್ಲಿ ಬಹುದೊಡ್ಡ ಚರಿತ್ರೆಯೇ ಇದೆ ಇದರಿಂದ ಮುಖ್ಯಮಂತ್ರಿಯೊಬ್ಬರು ರಾಜೀನಾಮೆ ನೀಡಿದ್ದರು ಹಲವು ಸಚಿವರು ಶಾಸಕರು ಮುಜುಗರಕ್ಕೆ ಒಳಗಾಗಿದ್ದರು ಬಹುಶಃ ಇದಕ್ಕೆ ಕೊನೆ ಇದೆ ಎಂದು ಹೇಳಲಾಗುವುದಿಲ್ಲ ಆದರೆ ಇಂಥದ್ದೊಂದು ಬೆಳವಣಿಗೆ ಯಾವ ಸರಕಾರಕ್ಕೂ ಶೋಭೆ ತರುವುದಿಲ್ಲ ಈ ಮೊದಲು ಸ್ಥಿರ ದೂರವಾಣಿಗಳಿದ್ದಾಗ ಕದ್ದಾಲಿಕೆ ಅಷ್ಟು ಸುಲಭವಿರಲಿಲ್ಲ ಈಗ ಎಲ್ಲರೂ ಮೊಬೈಲ್ ಬಳಸುತ್ತಿರುವುದರಿಂದ ಕದ್ದು ಕೇಳುವುದು ರೆಕಾರ್ಡ್ ಮಾಡಿ ಧ್ವನಿ ಆಲಿಸುವುದು ಸುಲಭ. ಯಾರು ಯಾರ ದೂರವಾಣಿಯನ್ನಾದರೂ ಕದ್ದು ಕೇಳಬಹುದಾಗಿದೆ ತಮ್ಮ ಪಕ್ಷದ 35 ಮುಖಂಡರ ದೂರವಾಣಿಗಳನ್ನು ಕೇಂದ್ರ ಸರಕಾರದ ಕೆಲವು ಕಿವಿಗಳು ಕದ್ದು ಕೇಳುತ್ತಿವೆ ಎಂದು ಗೃಹ ಸಚಿವ ರಾಮಲಿಂಗಾರೆಡ್ಡಿಯವರೇ ಇತ್ತೀಚೆಗೆ ಹೇಳಿದ್ದರು. ಭ್ರಷ್ಟಾಚಾರ ನಿಗ್ರಹದಳ ದುರುಪಯೋಗಪಡಿಸಿಕೊಂಡು ಬಿಜೆಪಿ ರಾಜ್ಯಾಧ್ಯಕ್ಷ ಯಡ್ಡಿಯೂರಪ್ಪ ಮತ್ತಿತರ ನಾಯಕರ ದೂರವಾಣಿಯನ್ನು ರಾಜ್ಯ ಸರಕಾರ ಕದ್ದು ಕೇಳುತ್ತಿದೆ ಎಂದು ಆರೋಪಿಸಲಾಗಿತ್ತು. ಈಗ ದೂರುವ ಸರದಿ ಎಂ ಬಿ ಪಾಟೀಲರದು ಆದಾಯ ತೆರಿಗೆ ಅಧಿಕಾರಿಗಳು ತಮ್ಮ ಮೊಬೈಲ್ ಫೋನ್ ಸಂಭಾಷಣೆಯನ್ನು ಕದ್ದು ಕೇಳಿಸಿಕೊಳ್ಳುತ್ತಿರುವುದಾಗಿ ಆರೋಪಿಸಿದ್ದರು ಅವರ ಪತ್ನಿ ಪುತ್ರ ವ್ಯವಹಾರ ನೋಡಿಕೊಳ್ಳುವ ವಕೀಲರು ಅವರ ಪತ್ನಿಯ ಫೋನುಗಳನ್ನು ಕದ್ದಾಲಿಸಲಾಗುತ್ತಿದೆ ಶೀಘ್ರದಲ್ಲೇ ದೂರು ದಾಖಲಿಸುತ್ತೇನೆ ಎಂದಿದ್ದಾರೆ ಅಷ್ಟು ಮಾತ್ರವಲ್ಲ ಸಚಿವರಾದ ಡೀಕೇಶಿ ಮಹದೇವಪ್ಪರ ಫೋನ್ ಕೂಡಾ ಕದ್ದಾಲಿಸಲಾಗುತ್ತಿದೆ ಎಂದಿದ್ದಾರೆ ಇವೆಲ್ಲ ಒಂದು ಹಂತಕ್ಕೆ ಸುದ್ದಿಯಾಗಿ ಚರ್ಚೆಯಾಗಿ ಇದ್ದಕ್ಕಿದ್ದಂತೆಯೇ ತಣ್ಣಗಾಗಿ ಬಿಡುತ್ತದೆ ಒಟ್ಟಿನಲ್ಲಿ ಸೂಕ್ತ ತನಿಖೆಯಾಗಿ ತಪ್ಪಿತಸ್ಥರಿಗೆ ಶಿಕ್ಷೆಯಾಗಿ ಸತ್ಯ ಹೊರ ಬರುವುದು ಯಾಚಾಗ ಹಾಗಾದಾಗ ಮಾತ್ರ ಕದ್ದು ಕೇಳುವ ಅಸಹ್ಯ ನಡವಳಿಕೆ ಕೊನೆಯಾಗಬಹುದೇನೋ

  • ಅವಿನಾಶ್ ಎಂ  ಕುದ್ರೋಳಿ ಮಂಗಳೂರು