ತುಳು ಚಲನಚಿತ್ರ ನಿರ್ಮಾಪಕರ ಸಂಘದ ಚುನಾವಣೆಗೆ ತಡೆ

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ಚಲನಚಿತ್ರ ನಿರ್ಮಾಪಕರ ಸಂಘದ ಚುನಾವಣೆಗೆ ಡಿ 24ರಂದು (ಇಂದು) ನಡೆಯಬೇಕಾಗಿದ್ದ 2016-17ನೇ ಸಾಲಿನ ಪದಾಧಿಕಾರಿಗಳ ಮತ್ತು ಕಾರ್ಯಕಾರಿ ಸಮಿತಿಗಳ ಸದಸ್ಯರ ಚುನಾವಣೆಯನ್ನು ನ್ಯಾಯಾಲಯದ ಆದೇಶದಂತೆ ರದ್ದು ಪಡಿಸಲಾಗಿದೆ.

ಸಂಘದ ಸದಸ್ಯರಲ್ಲೊಬ್ಬರಾಗಿರುವ ರೋಹನ್ ಶೆಟ್ಟಿ ಎಂಬವರು ಇದೀಗ ನಡೆಸಲಾಗುತ್ತಿರುವ ಈ ಚುನಾವಣೆಗಳ ಪ್ರಕ್ರಿಯೆ ತಮಗೆ ಸರಿಕಾಣಿಸುತ್ತಿಲ್ಲ. ಈ ಚುನಾವಣೆ ಪ್ರಕ್ರಿಯೆಯನ್ನು ನ್ಯಾಯಬದ್ಧ ಹಾಗೂ ಕಾನೂನಿನ ಚೌಕಟ್ಟನ್ನು ಬಿಟ್ಟು ನಡೆಸಲಾಗುತ್ತಿದೆಯೆಂದು ರಜಾ ಪೀಠದ ನ್ಯಾಯಾಲಯದಲ್ಲಿ ವ್ಯಾಜ್ಯ ದಾಖಲಿಸಿದ್ದು, ಸದರಿ ನ್ಯಾಯಾಲಯವು ಚುನಾವಣೆಯನ್ನು ನಡೆಸದಂತೆ ನಿಬರ್ಂಧ ಹೊರಡಿಸಿ ತಡೆಯಾಜ್ಞೆ ನೀಡಿದೆ.

ಆ ಪ್ರಯುಕ್ತ ನ್ಯಾಯಾಲಯದ ಆಜ್ಞೆಗೆ ಗೌರವ ನೀಡಿ ಡಿ 24ರಂದು ನಡೆಯಬೇಕಾಗಿದ್ದ ಸಂಘದ ಮಹಾಸಭೆ ಮತ್ತು ಚುನಾವಣೆಯನ್ನು ರದ್ದು ಪಡಿಸಲಾಗಿದೆ ಎಂದು ಅಧ್ಯಕ್ಷ ಟಿ ಎ ಶ್ರೀನಿವಾಸ ತಿಳಿಸಿದ್ದಾರೆ.