ಪುತ್ತೂರಿಗೆ ಬಂದ ಪ್ರತಿಮೆ ಮಾನವ ನಗಲೇ ಇಲ್ಲ

ಆಗಸ್ಟ್ 7ರಂದು ಪುತ್ತೂರಿನ ಕೋರ್ಟ್ ರಸ್ತೆಯಲ್ಲಿ ಜನವೋ ಜನ ಏನೆಂದು ಗ್ರಹಿಸಿದ್ದೀರಾ ಟೋಪ್ಕೊ ಜ್ಯುವೆಲ್ಲರಿ ಆರಂಭ ದಿನವದು ಅಲ್ಲಿ ಒಂದು ಆಕರ್ಷಣೆಯ ಬಿಂದು ಪ್ರತಿಮೆ ಮಾನವ ಈ ಪ್ರತಿಮೆ ಮಾನವನನ್ನು ನೀವು ನಗಿಸಿದ್ದೀರಾ ಹಾಗೊಂದು ವೇಳೆ ಪ್ರತಿಮೆ ಮಾನವನನ್ನು ನೀವು ನಗಿಸಿದ್ದೇ ಆದಲ್ಲಿ ಒಂದೂವರೆ ಲಕ್ಷದ ಬಹುಮಾನ ನಿಮ್ಮದಾಗುತ್ತಿತ್ತು ಕಾರ್ಯಕ್ರಮದಲ್ಲಿ ಭಾಗವಹಿಸಿದ ಸುಮಾರಷ್ಟು ಜನ ನಗಿಸಲು ನಾನಾ ರೀತಿ ಚಮತ್ಕಾರ ಮಾಡಿದರೂ ಈ ಪ್ರತಿಮೆ ಮಾನವ ನಗಲೇ ಇಲ್ಲ ಕಾರಣ ಅವರ ಹೆಸರೇ ಪ್ರತಿಮೆ ಮಾನವನಲ್ಲವೇ ವಿಶ್ವದಾದ್ಯಂತ ಯಾರಾದರೂ ಪ್ರತಿಮೆ ಮಾನವನನ್ನು ನಗಿಸಿದ ಉದಾಹರಣೆ ಇದೆಯೇ ಸಂಘಟಕರು ತಿಳಿಸುವರೇ

  • ಪ್ರದ್ಯುಮ್ನ  ಪುತ್ತೂರು