ಭಟ್ಕಳದಲ್ಲಿ ಏ 21ರಿಂದ ರಾಜ್ಯ ಮಟ್ಟದ ಫುಟ್ಬಾಲ್ ಪಂದ್ಯಾವಳಿ

ನಮ್ಮ ಪ್ರತಿನಿಧಿ ವರದಿ

ಭಟ್ಕಳ : ಭಟ್ಕಳ್ ಇಂಟರ್ ಫುಟ್ಬಾಲ್ ಅಸೋಸಿಯೇಶನ್ ವತಿಯಿಂದ ಏಪ್ರಿಲ್ 21, 22, 23ರಂದು ನವಾಯತ್ ಕಾಲೊನಿಯ ತಾಲೂಕು ಕ್ರೀಡಾಂಗಣದಲ್ಲಿ ರಾಜ್ಯ ಮುಕ್ತ ಫುಟ್ಬಾಲ್ ಪಂದ್ಯಾವಳಿ (ಬಿಫಾ ಕಪ್) ಆಯೋಜಿಸಲಾಗಿದೆ.

ಈ ಕುರಿತು ಪಟ್ಟಣದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಪಂದ್ಯಾವಳಿಯ ಸಂಚಾಲಕ ಮಾಬಿಯಾ ಮೊತೆಶ್ಯಾಂ, “ಭಟ್ಕಳದಲ್ಲಿ ನಡೆಯುವ ಫುಟ್ಬಾಲ್ ಪಂದ್ಯಾವಳಿಯಲ್ಲಿ ರಾಜ್ಯದ ವಿವಿಧ ಭಾಗದ 25ಕ್ಕೂ ಅಧಿಕ ತಂಡಗಳು ಪಾಲ್ಗೊಳ್ಳಲಿವೆ. ನಮ್ಮ ಜಗತ್ತಿನ 15ಕ್ಕೂ ಅಧಿಕ ರಾಷ್ಟ್ರಗಳ ರಾಷ್ಟ್ರೀಯ ಆಟ ಫುಟ್ಬಾಲ್ ಆಗಿದೆ. ಮುಂದಿನ ಫುಟ್ಬಾಲ್ ವಿಶ್ವ ಟೂರ್ನಿಯಲ್ಲಿ ಭಾರತವೂ ಪ್ರತಿನಿಧಿಸುವ ಸಾಧ್ಯತೆ ಇದೆ” ಎಂದರು.