ಎತ್ತಿನಹೊಳೆ ಯೋಜನೆ ಜಾರಿಗೆ ರಾಜ್ಯ ಬಿಜೆಪಿ ಬೆಂಬಲ : ಯಡ್ಡಿ

ಕೋಲಾರ : “ಎತ್ತಿನಹೊಳೆ ಯೋಜನೆಯನ್ನು ಬಿಜೆಪಿ ಪಕ್ಷವು ಬೆಂಬಲಿಸುತ್ತದೆ. ಈ ಬಗ್ಗೆ ಯಾವುದೇ ಗೊಂದಲ ಇಲ್ಲ”  ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಯಡ್ಡಿಯೂರಪ್ಪ ಹೇಳಿದ್ದಾರೆ.

ನೇತ್ರಾವತಿ ನದಿ ತಿರುಗಿಸುವ ಎತ್ತಿನ ಹೊಳೆ ಯೋಜನೆ ವಿರುದ್ಧ ದ ಕ ಜಿಲ್ಲೆಯಲ್ಲಿ ಬಿಜೆಪಿಯ ಜನಪ್ರತಿನಿಧಿಗಳು ಪ್ರತಿಭಟನೆ ನಡೆಸುತ್ತಿದ್ದಾರೆ. ಆದರೆ ಯಡ್ಡಿಯೂರಪ್ಪ ಯೋಜನೆಯನ್ನು ಬೆಂಬಲಿಸುವ ಮೂಲಕ ಪಕ್ಷದ ನಿಲುವನ್ನು ಸ್ಪಷ್ಪಪಡಿಸಿದ್ದಾರೆ.

“ಎತ್ತಿನಹೊಳೆ ಯೋಜನೆ ವಿಷಯದಲ್ಲಿ ಕೆಲವರು ಅನಗತ್ಯ ಗೊಂದಲ ಸೃಷ್ಟಿಸುತ್ತಿದ್ದಾರೆ. ರಾಜ್ಯ ಸರಕಾರ ಭೂಸ್ವಾಧೀನದ ನೆಪದಲ್ಲಿ ಯೋಜನೆಯ ಕಾಮಗಾರಿಯಲ್ಲಿ ವಿಳಂಬ ಮಾಡುತ್ತಿದೆ” ಎಂದರು.

“ಯೋಜನೆ ಜಾರಿಯಿಂದ ದಕ್ಷಿಣ ಕನ್ನಡದ ಜನರಿಗೆ ಯಾವುದೇ ರೀತಿಯಲ್ಲಿ ತೊಂದರೆ ಇಲ್ಲ. ಇದರಿಂದ ನೀರಿನ ಸಮಸ್ಯೆ ಸೃಷ್ಟಿಯಾಗಬಹುದೆಂಬ ಆತಂಕ ಅವರನ್ನು ಕಾಡುತ್ತಿದೆ. ಆದ ಕಾರಣ ಸರಕಾರ ಅಲ್ಲಿನ ಜನ ಪ್ರತಿನಿಧಿಗಳು ಹಾಗೂ ಜನರ ಮನವೊಲಿಸಿ ಯೋಜನೆ ಜಾರಿಗೊಳಿಸಬೇಕು. ಇದು ಮುಖ್ಯಮಂತ್ರಿ ಹಾಗೂ ನೀರಾವರಿ ಸಚಿವರ ಜವಾಬ್ದಾರಿಯಾಗಿದೆ” ಎಂದರು.